ಶಿವಮೊಗ್ಗ,ಅ.20:
ನಿತ್ಯದ ಕೆಲಸದ ಮುಗಿಸಿಕೊಂಡು ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ಯುವಕನೋರ್ವನಿಗೆ ಲಾರಿಯೆಂಬ ಮಹಾಮಾರಿ ಡಿಕ್ಕಿಯಾಗಿ ಸಾವು ಕಂಡಿರುವ ದುರಂತದ ಘಟನೆ ಈಗಷ್ಟೆ ಶಿವಮೊಗ್ಗ ಸರಹದ್ದಿನಲ್ಲಿ ನಡೆದಿದೆ.
ಶಿವಮೊಗ್ಗ ಸಮೀಪದ ಆಯನೂರು ಒಳವಲಯದ ಮುದ್ದಿನಕೊಪ್ಪದ ಬಳಿ ಲಾರಿ, ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಲ್ಲಿ ಕಾರುಚಾಲಕ ಆಗಿದ್ದ ಶಿವಮೊಗ್ಗ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ಅತ್ತೆ ಮನೆಗೆ ಹೋಗುತ್ತಿದ್ದ ಅಳಿಯ ಸ್ಥಳದಲ್ಲೆ ಸಾವು ಕಂಡಿರುವ ಘಟನೆ ನಡೆದಿದೆ.
ಹೊನ್ನಾಳ್ಳಿ ತಾಲ್ಲೂಕಿನ ಗೋಣಗೇರೆ ನಿವಾಸಿ ನಾಗೇಂದ್ರ (32) ಮೃತ ದುರ್ದೈವಿ.
ಪ್ರಕರಣದ ವಿವರ : ನಾಗೇಂದ್ರ ಅವರು ಕಾರಿನಲ್ಲಿ ಬೇಕರಿ ಐಟಂಗಳನ್ನು ಆಯನೂರಿನಿಗೆ ಕೊಟ್ಟು ತನ್ನ ಅತ್ತೆಯ ಮನೆಯಾದ ಸೋಮಿನಕೊಪ್ಪಕ್ಕೆ ತೆರಳುತ್ತಿದ್ದಾಗ ಶಿವಮೊಗ್ಗದಿಂದ ಬಂದ ಲಾರಿಯೊಂದು ಮುಂದೆ ಹೋಗುತ್ತಿದ್ದ ಲಾರಿಗೆ ಓವರ್ ಟೇಕ್ ಮಾಡಲು ಹೋದಾಗ ಲಾರಿಯ ಸ್ಟೇರಿಂಗ್ ಕಟ್ಟಾಗಿ ಆಯನೂರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಸೋಮಿನಕೊಪ್ಪ, ಗೋಣಿಗೆರೆ ಜನ ಕಂಬನಿಮಿಡಿದಿದ್ದಾರೆ.