ಶಿವಮೊಗ್ಗ, ಅ.18:
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಕಳೆದ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, 2020-21ನೇ ಸಾಲಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ನಿವ್ವಳ ಲಾಭ ರೂ.18.46 ಕೋಟಿ ಗಳಿಸಿರುವುದು ಈಗ ನಬಾರ್ಡ್ ನ ಗೌರವಕ್ಕೆ ಪಾತ್ರವಾಗಿದೆ.
ನಬಾರ್ಡ್ ನವರು ಬ್ಯಾಂಕಿನ ಪರಿವೀಕ್ಷಣೆಯನ್ನು ನಡೆಸಿ, ಮೌಲ್ಯಮಾಪನವನ್ನು ಮಾಡಿ ಬ್ಯಾಂಕಿಗೆ “ಎ” ಶ್ರೇಣಿಯನ್ನು ನೀಡಿರುವುದಾಗಿ ಹಾಗೂ ಬ್ಯಾಂಕು ಆರ್ಥಿಕವಾಗಿ ಅತ್ಯಂತ ಬಲಿಷ್ಟವಾಗಿದೆ ಎಂದು ತಿಳಿಸಿ, ಪತ್ರ ಬರೆದಿರುತ್ತಾರೆ. ಇದು ಬ್ಯಾಂಕಿನ ಆಡಳಿತಕ್ಕೆ ಸಂದ ಗೌರವ ಎಂದು ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಉಪಾಧ್ಯಕ್ಷ ಹೆಚ್. ಎಲ್. ಷಡಾಕ್ಷರಿ ಹಾಗೂ ಆಡಳಿತ ಮಂಡಳಿ ತಿಳಿಸಿದೆ.
2011-12ನೇ ಸಾಲಿನಿಂದ ಈಚೆಗೆ ಇದೇ ಪ್ರಥಮ ಬಾರಿಗೆ ಬ್ಯಾಂಕಿಗೆ ನಬಾರ್ಡ್ ನಿಂದ “ಎ” ಶ್ರೇಣಿ ದೊರೆತಿರುವುದನ್ನು ಅತ್ಯಂತ ಸಂತೋಷದ ಸಂಗತಿ ಎಂದಿರುವ ಚನ್ನವೀರಪ್ಪ ಅವರು , ಬ್ಯಾಂಕನ್ನು ಇನ್ನೂ ಹೆಚ್ಚಿನ ಪ್ರಗತಿಯತ್ತ ಕೊಂಡೊಯ್ಯಲು ಎಲ್ಲರ ಸಹಕಾರ ಕೋರಿದ್ದಾರೆ.