Site icon TUNGATARANGA

ಶಿವಮೊಗ್ಗ/ಆರು ವರುಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಕಿರಾತಕ, ಜನಕ್ಕೆ ಸಿಕ್ಕಿದ್ರೆ ತಿಥಿ ಗ್ಯಾರಂಟಿ!

ಹೊಳೆಹೊನ್ನೂರು ಬಳಿಯಲ್ಲಿ ದುರ್ಘಟನೆ

ಶಿವಮೊಗ್ಗ. ಆ.17:
ಜಿಲ್ಲೆಯ ಭದ್ರಾವತಿ ತಾ. ಹೊಳೆಹೊನ್ನೂರು ಹೋಬಳಿಯ ಗ್ರಾಮ ಅದರಲ್ಲೂ ತಾಂಡಾ ಅಲಿಯಾಸ್ ಹಟ್ಟಿಯಲ್ಲಿ ನಿನ್ನೆ ಮದ್ಯಾಹ್ನ ಮೂರು ಮುವತ್ತರಿಂದ ಗೊಂದಲ, ಆಕ್ರೋಶದ ವಾತಾವರಣ ಸೃಷ್ಟಿಯಾಗಿದೆ.
ಇಲ್ಲಿ ಆರು ವರುಷದೊಳಗಿನ ಹೆಣ್ಣು ಮಗುವಿನ ಮೇಲೆ ವಿಕೃತ ಮನಸಿನ ಯುವಕನೋರ್ವ ಅತ್ಯಾಚಾರ ಮಾಡಿದ್ದಾನೆ.
ನಿನ್ನೆ ಮದ್ಯಾಹ್ನ ಮೂರೂ ಮುವತ್ತರಿಂದ ಇಲ್ಲಿಯವರೆಗೆ ವಿಚಾರಣೆಯಿಂದ ದೂರು ದಾಖಲಾಗಿರಲಿಲ್ಲ. ಈಗಷ್ಟೇ ದೂರು ದಾಖಲಾಗಿದೆ.
ಅಯೋಗ್ಯ ಮನಸಿನ ಈ ಯುವಕ ವಾಹನ ಚಾಲಕನಾಗಿದ್ದು, ನಾಪತ್ತೆಯಾಗಿದ್ದ ಆತನನ್ನು ಪತ್ತೆ ಹಚ್ಚುವಲ್ಲಿ ಹೊಳೆಹೊನ್ನೂರು ಪೊಲೀಸ್ ಇನ್ಸ್ ಸ್ಪೆಕ್ಟರ್ ಲಕ್ಷ್ಮಿಪತಿ ಅವರ ತಂಡ ಯಶಸ್ವಿಯಾಗಿದೆ.
ವಿಕೃತನನ್ನು ವಿನಯ್ ಎಂದು ಗುರುತಿಸಲಾಗಿದ್ದು, ಈತ ಕಳೆದ ಎಂಟು ವರುಷದ ಹಿಂದೆ ಅಪ್ರಾಪ್ತ ಯುವಕನಾಗಿದ್ದಾಗಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ರಿಮ್ಯಾಂಡ್ ಹೊಂ ಗೆ ದಾಖಲಾಗಿದ್

ಗ್ರಾಮೀಣ ಪ್ರದೇಶದ ಅವಿದ್ಯಾವಂತ ಕುಟುಂಬದ ಪುಟ್ಟ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಘಟನೆ ನಡೆದು ದಿನವೊಂದು ಕಳೆದರೂ ದೂರು ದಾಖಲಾಗಲು ಮೀನಾಮೇಷವೇಕೇ….? ಶಿವಮೊಗ್ಗ ಸರಹದ್ದಿನ ಅದರಲ್ಲೂ ಹೊಳೆಹೊನ್ನೂರು, ಕೈಮರ, ಕಲ್ಲಿಹಾಳ್ ಮದ್ಯದ ತಾಂಡಾ ಅಲಿಯಾಸ್ ಹಟ್ಟಿಯಲ್ಲಿ ನಡೆದ ದೂರು ದಾಖಲಾಗಲು ತಡವೇಕೇ…? ಇಲ್ಲಿ ಪೊಲೀಸ್, ಮಹಿಳಾ ಮತ್ತುಮಕ್ಕಳ ಇಲಾಖೆಯ ಸುರ್ಪದಿಯ ಮಕ್ಕಳ ರಕ್ಷಣಾ ಘಟಕ ಕ್ರಿಯಾಶೀಲವಾಗಿದ್ದರೂ ಕಾನೂನಾತ್ಮಕ, ಹಿರಿಯ ಅಧಿಕಾರಿಗಳ ಒತ್ತಡ ಹಾಗೂ ಮನೆಯವರ ದಡ್ಡತನ ಕಾರಣವಾಯ್ತಾ….?


ದೂರಿನ ವಿವರ:
ಗ್ರಾಮೀಣಭಾಗದ ಈ ತಾಂಡಾ/ ಹಟ್ಟಿಯಲ್ಲಿ ತಾಯಿ ಅಡಿಕೆ ಸುಲಿಯಲು ಹೋಗಿದ್ದಾಗ, ಈ ಅಪ್ರಾಪ್ತ ಬಾಲಕಿಗೆ ಚಾಕಲೇಟ್ ಕೊಡಿಸುವುದಾಗಿ ಹೇಳಿ ಐದು ರೂ ನೀಡಿ ಪಕ್ಕದ ಮನೆಗೆ ಕರೆದೊಯ್ದು ವಂಚಿಸಿದ್ದಾನೆ.


ಈ ಬಾಲಕಿಯ ಸ್ನೇಹಿತೆಯೊಬ್ಬಳು ತಾಯಿ ಬಳಿ ಹೇಳಿದಾಗ ತಾಯಿ ವಿಚಾರಿಸಿದಾಗ ಈ ಘಟನೆ ಹೊರಬಿದ್ದಿದೆ.
ಈ ಪ್ರಕರಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿದೆ.

ಮಗುವಿನ ಮನಸಿನ ಆರರ ಹೆಣ್ಣುಮಗೂನಾ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಏನಾದರೂ ನಿನ್ನೆ ರಾತ್ರಿ ಅಲ್ಲಿ ಸಿಕ್ಕಿದ್ದರೆ, ನಾವಾಗಲೇ ತಿಥಿ ಆಗುತ್ತಿತ್ತು….,! ಈ ವಾಕ್ಯ ಆ ಹಳ್ಳಿ ಜನರದ್ದು

Exit mobile version