Site icon TUNGATARANGA

ಕೊರೊನಾ: ಶಿವಮೊಗ್ಗ 23, ಶಿಕಾರಿಪುರ 20, ಒಟ್ಟು 46…! ರಾಜ್ಯ ವರದಿ ಪ್ರಕಾರ ಕೇವಲ 104!?

ಶಿವಮೊಗ್ಗ, ಜು.19: ಶಿವಮೊಗ್ಗ ಜಿಲ್ಲೆಯ ಕೊರೊನಾ ಸೊಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಭಾನುವಾರದ ಇಂದಿನ ವರದಿ ಮತ್ತೆ ಶಿವಮೊಗ್ಗ ಹಾಗೂ ಶಿಕಾರಿಪುರವನ್ನು ಬೆಚ್ಚಿಬೀಳಿಸಿದೆ.
ತೀರಾ ಗಾಬರಿಯಾಗುವಂತೆ ಹೆಚ್ಚುತ್ತಿರುವ ಕೊರೊನಾ ಸೊಂಕಿತರ ಸಂಖ್ಯೆಯ ನಡುವಿನ ಇಂದಿನ ಜಿಲ್ಲಾಡಳಿತದ ವರದಿಯಲ್ಲಿ46 ಪ್ರಕರಣಗಳು ದಾಖಲಾಗಿವೆ.
ದಿನೇ ದಿನೇ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೇರಿಕೊಳ್ಳುವ ಶಿವಮೊಗ್ಗ ತಾಲ್ಲೂಕಿನದ್ದೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಇಂದು ಶಿವಮೊಗ್ಗದಲ್ಲಿ 23 ಪ್ರಕರಣ ಕಂಡುಬಂದಿವೆ.
ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿ ಮತ್ತೆ ಇಂದು 20 ಪ್ರಕರಣಗಳು ಪತ್ತೆಯಾಗಿ ಶಿಕಾರಿಪುರದಲ್ಲಿ ಆತಂಕ ಸೃಷ್ಟಿಸಿದೆ.


ಭದ್ರಾವತಿ 3 ಸೊಂಕಿತರು ಕಂಡುಬಂದಿದ್ದಾರೆ.
ಒಟ್ಟು 857 ಪ್ರಕರಣಗಳಲ್ಲಿ 428ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದ
ಸೊಂಕಿತರಿಗೆ ಕೋವಿಡ್ ಆಸ್ಪತ್ರೆ ಹಾಗೂ ಗಾಜನೂರಿನ ಮುರಾರ್ಜಿ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂತೆಯೇ ರಾಜ್ಯ ಆರೋಗ್ಯ ಇಲಾಖೆ ಇಂದೇ ಬಿಡುಗಡೆ ಮಾಡಿದ ವರದಿಯಲ್ಲಿ ಶಿವಮೊಗ್ಗ ಜಿಲ್ಲೆಯ ಪಾಲು 104. ಅದರ ಪ್ರಕಾರ ಒಟ್ಟು 833. ಸಾವಿನ ಸಂಖ್ಯೆ 12.
ಎರಡೂ ಬರದಿಗಳು ಒಂದಕ್ಕೊಂದು ತಾಳೆ ಇಲ್ಲ. ಎರಡೂ ಸಮಗ್ರ ಮಾಹಿತಿ ನಿಮಗಾಗಿ.

Exit mobile version