ತೀರ್ಥಹಳ್ಳಿ,ಅ.13:
ಮಾನಸಿಕವಾಗಿ ನೊಂದ ಯುವಕನೊರ್ವ ಮನೆಯಿಂದ ಬೈಕ್ ನಲ್ಲಿ ಕಾಣದ ಜಾಗಕ್ಕೆ ಹೊರಟು ಮಾರ್ಗ ಮಧ್ಯದಲ್ಲಿ ತಾನು ಕೊಂಡೊಯ್ದ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆ ಕೊಣಂದೂರು ಸಮೀಪದ ಅಕ್ಲಾಪುರದಲ್ಲಿ ನಡೆದಿದೆ
ಮೃತ ಯುವಕ ಅಕ್ಲಾಪುರ ವಾಸಿ ರಾಘವೇಂದ್ರ(40) ಎಂದು ಗುರುತಿಸಲಾಗಿದೆ.
ಮನೆಯಿಂದ ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಸೀಮೆಎಣ್ಣೆ ಕೊಂಡೊಯ್ದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಆಸ್ತಿವ್ಯಾಜ್ಯದ ವೈಯಕ್ತಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಮೃತನ ತಂದೆಯ ಹಿರಿ ಹೆಂಡತಿ ಮಗ ಈತ ಎನ್ನಲಾಗಿದೆ. ಇವರ ಆಸ್ತಿ ಹಂಚಿಕೆ ವಿಚಾರವಾಗಿ ಹತ್ತಾರು ಬಾರಿ ಪಂಚಾಯ್ತಿಗಳಾಗಿದ್ದು, ಇದರಲ್ಲಿ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳಿದ್ದರೆನ್ನಲಾಗಿದೆ.
ಅತ್ಯಂತ ಮೃದು ಸ್ವಭಾವದ, ಇಡೀ ಅಕ್ಲಾಪುರ ಸರಹದ್ದಿನಲ್ಲಿ ಒಳ್ಳೆಯವನು ಎನಿಸಿಕೊಳ್ಳುತ್ತಿದ್ದ ಇವರ ಆತ್ಮಹತ್ಯೆ ಇಡೀ ಗ್ರಾಮವನ್ನು ಕಂಗಲಾಗಿಸಿದೆ.
ಮೃತ ವ್ಯಕ್ತಿ ಪತ್ನಿ, ಎರಡು ಮಕ್ಕಳನ್ನು ಅಗಲಿದ್ದು, ಈ ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.