ಶಿವಮೊಗ್ಗ ನಗರದಲ್ಲಿ ಇಂದು ಸಂಜೆಯಿಂದ ಭಾರಿ ಮಳೆಯಾಗಿದ್ದು, ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ಇಂದು ಬೆಳಗ್ಗೆಯಿಂದ ಬಿಸಿಲಿನ ವಾತಾವರಣವಿದ್ದ ನಗರದಲ್ಲಿ ಸಂಜೆ ಆರರ ಹೊತ್ತಿಗೆ ಶುರುವಾದ ಅಬ್ಬರದ ಮಳೆ ಇನ್ನೂ ಸಹ ಅಬ್ಬರಿಸುತ್ತಲೇ ಇದೆ.
ಭಾರಿ ಮಳೆಗೆ ಶಿವಮೊಗ್ಗ ನಗರದಲ್ಲಿ ನಡೆತ್ತಿರುವ ಕಾಮಗಾರಿಗಳ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ತುಂಬಿದ್ದು, ಜನರು ರಸ್ತೆಗಳಲ್ಲಿ ಆತಂಕದಿಂದ ಸಂಚರಿಸುವಂತಾಗಿದೆ.