Site icon TUNGATARANGA

ಕೊಲೆಗಾರರ ಜಾಡು ತೋರಿಸಿದ ‘ತುಂಗಾ’…!

ದಾವಣಗೆರೆ, ಜು.17: ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆ ಪ್ರಕರಣವನ್ನು ಪೋಲಿಸರು ಬೇಧಿಸುವಲ್ಲಿ ಸಫಲರಾದ ದಾವಣಗೆರೆ ಪೊಲೀಸರಿಗೆ ಆರೋಪಿಗಳ ಜಾಡು ಹುಡುಕೊಟ್ಟದ್ದು, ಅಲ್ಲಿನ ಡಿ.ಎ.ಆರ್
ಕ್ರೈಂ ವಿಭಾಗದ ತುಂಗಾ.
ಆರೋಪಿಯ ಪತ್ತೆಗಾಗಿ ಘಟನಾ ಸ್ಥಳದಿಂದ ಹನ್ನೊಂದು ಕೊ.ಮಿ ದೂರದಲ್ಲಿದ್ದ ಕಾಶಿಪುರ ತಾಂಡಾದಲ್ಲಿದ್ದ ಚಂದ್ರಾನಾಯ್ಕ್ ಕೊಲೆಗಾರನನ್ನು ಪತ್ತೆ ಹಚ್ಚಿಕೊಟ್ಟಿದೆ.


ಎಸ್ಪಿ ವಿವರ:
ಪ್ರಕರಣದ ಆರೋಪಿಯಾದ ಚೇತನ್ ಎಂಬಾತನನ್ನು ಬಂಧಿಸಿ, ಈ ಕೃತ್ಯಕ್ಕೆ ಬಳಸಿದ್ದ 1 ಪಿಸ್ತೂಲು, 5 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು ಇನ್ನುಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿರುವುದಾಗಿ ಜಿಲ್ಲಾ ಪೋಲೀಸ್ ವರಿಷ್ಠಾದಿಕಾರಿಗಳಾದ.   ಹನುಮಂತರಾಯ ಅವರು ಇಂದು ಸುದ್ದಿಗೊಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ವಿವರ
ದಾವಣಗೆರೆ ಬಳಿಯ ಸೂಳೆಕೆರೆ ಗುಡ್ಡದಲ್ಲಿ ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದ ಚಂದ್ರನಾಯ್ಕನ ಕೊಲೆ ನಡೆದಿದ್ದು ಮೃತರ ಸಹೋದರ ನಾಗರಾಜ್ ಬಸವಾಪಟ್ಟಣ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಪತ್ತೆಗಾಗಿ ಎರಡು ತಂಡ ರಚಿಸಲಾಗಿತ್ತು.
ಆರೋಪಿ ಚೇತನ್ ಈ ಹಿಂದೆ ಕೈಸಾಲವಾಗಿ 1.70 ಲಕ್ಷ ರೂ ಮಾಡಿರುತ್ತಾನೆ. ಆರೋಪಿ ಚೇತನ್ ಮತ್ತು ಇವನ ಸ್ನೇಹಿತರ ಗುಂಪೊಂದು ದಾರಾವಾಡ ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ವಿಚಾರ ಮೃತ ಚಂದ್ರನಾಯ್ಕನಿಗೆ‌ ಗೊತ್ತಾಗಿ ಕದ್ದ ಮಾಲಿನಲ್ಲಿ ನನಗೂ ಪಾಲು ಬೇಕು ಇಲ್ಲದಿದ್ದರೆ ಗ್ರಾಮದ ಮುಖಂಡರುಗಳಿಗೆ ಗ್ರಾಮಸ್ಥರಿಗೆ ವಿಷಯವನ್ನು ತಿಳಿಸುವುದಾಗಿ ಆಗಾಗ್ಗೆ  ಚಂದ್ರನಾಯ್ಕ  ಹೆದರಿಸುತಿದ್ದನ್ನು . ಇದರಿಂದ ತುಂಭಾ ರೋಸಿ ಹೋಗಿದ್ದ ಚೇತನ್ ಚಂದ್ರನಾಯ್ಕನ ಮುಗಿಸುವುದಕ್ಕೆ ಸ್ಕೆಚ್ ಹಾಕಿ. ಹಣ ಕೊಡುವುದಾಗಿ  ಉಪಾಯದಿಂದ ಸೂಳೆಕೆರೆ ಗುಡ್ಡಕ್ಕೆ ಕರೆಸಿಕೊಂಡು ಧಾರಾವಾಡ ನಗರದಲ್ಲಿ ಕದ್ದಿದ್ದ ಪಿಸ್ತೂಲಿನಿಂದ ಚಂದ್ರನಾಯ್ಕನ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಸುದ್ದಿ ಈಗ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ. ಆ ಪಿಸ್ತೂಲು ಕಳುವಾಗಿರುವ ಬಗ್ಗೆ ಧಾರವಾಡದ ವಿಧ್ಯಾಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹನುಮಂತರಾಯ ವಿವರಿಸಿದ್ದಾರೆ.
ಪ್ರಕರಣವನ್ನು ಬೆನ್ನತ್ತಿ ಬೇದಿಸಿದ  ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೊಳಿ , ಸರ್ಕಲ್ ಇನ್ಸ್ ಪೆಕ್ಟರ್ ಆರ್ ಆರ್ ಪಾಟೀಲ್ , ಸಂತೇಬೆನ್ನೂರು ಪೋಲಿಸ್ ಠಾಣೆ ಪಿಎಸ್ಐ ಶಿವರುದ್ರಪ್ಪ ಎಸ್ ಮೇಟಿ , ಚನ್ನಗಿರಿ ಕ್ರೈಂ ಪಿಎಸ್ಐ ಶ ರೂಪ್ಲೀಬಾಯಿ , ಬಸವಾಪಟ್ಟಣ ಪಿಎಸ್ಐ , ಭಾರತಿ ಹಾಗೂ ಸಿಬ್ಬಂದಿಗಳಾದ ರುದ್ರೇಶ್ ಎಂ , ರುದ್ರೇಶ್ ಎಸ್ , ಆರ್ ಧರ್ಮಪ್ಪ , ಮಹೇಶನಾಯ್ಕ , ಮಂಜನಾಯ್ಕ , ರವಿಕುಮಾರ್ , ಬಸವರಾಜ  ಕೋಟೆಪ್ಪನವರ್ , ರವಿ , ನಾಗರಾಜ್ ತಳವಾರ್ ಕಾರ್ಯಚರಣೆ ತಂಡದಲ್ಲಿದ್ದ  ಎಲ್ಲಾ ಸಿಬ್ದಂದಿಗಳ ಕಾರ್ಯವನ್ನು ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಹನುಮಂತರಾಯ‌ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Exit mobile version