Site icon TUNGATARANGA

ಶಿವಮೊಗ್ಗ: ಲಾಡ್ಜ್‌ನಲ್ಲಿ ಇಬ್ಬರು ಯುವಕರು ಆತ್ಮಹತ್ಯೆ

Banglur Crime

ಶಿವಮೊಗ್ಗ: ಸಾಗರ ತಾಲೂಕಿನ ಜೋಗ ಬಸ್ ನಿಲ್ದಾಣದ ಸಮೀಪದ ಖಾಸಗಿ ಲಾಡ್ಜ್‌ವೊಂದರಲ್ಲಿ ಇಬ್ಬರು ಯುವಕರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬನಹಟ್ಟಿ ಗ್ರಾಮದ ಸಂತೋಷ್ (23) ಮತ್ತು ಹನುಮಂತ (28) ಮೃತಪಟ್ಟ ಯುವಕರಾಗಿದ್ದಾರೆ.


ಸಂತೋಷ್ ಮತ್ತು ಹನುಮಂತ ಅವರು ಸೆ. ೨೪ರ ತಡರಾತ್ರಿ ಲಾಡ್ಜ್‌ಗೆ ಬಂದ್ ಡಬ್ಬಲ್ ಬೆಡ್‌ರೂಂ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನ ಇಬ್ಬರೂ ಹೊರಗೆ ಬಂದು ಊಟ ತೆಗೆದು ಕೊಂಡು ರೂಮ್ ಸೇರಿಕೊಂಡಿದ್ದರು.


ಶನಿವಾರ ರಾತ್ರಿ 8.30ಕ್ಕೆ ರೂಮ್‌ಬಾಯ್ ಊಟ ಬೇಕೆಂದು ಕೇಳಲು ಬಾಗಿಲು ಬಡಿದಾಗಲೂ ಇಬ್ಬರೂ ಹೊರಗೆ ಬಂದಿರಲಿಲ್ಲ. ರೂಮ್‌ಬಾಯ್ ಇಬ್ಬರೂ ಮಲಗಿರಬೇಕು ಎಂದು ವಾಪಾಸ್ ಹೋಗಿದ್ದನು.
ಭಾನುವಾರ ಬೆಳಿಗ್ಗೆ ರೂಮಿನ ಬಾಗಿಲು ಸಾಕಷ್ಟು ಬಾರಿ ಬಡಿದಾಗಲೂ ಬಾಗಿಲು ತೆರೆಯಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ರೂಮಿನ ಬಾಗಿಲು ಒಡೆದು ನೋಡಿದಾಗ ಇಬ್ಬರೂ ರೂಮಿನ ಸೀಲಿಂಗ್‌ಗೆ ಅಳವಡಿಸಿದ್ದ ಎರಡು ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version