Site icon TUNGATARANGA

ಪಶು ವೈದ್ಯಾಧಿಕಾರಿ ನಿರ್ಲಕ್ಷ್ಯ: ಹಸುಗಳ ಸಾವು, ಕ್ರಮಕ್ಕೆ ಸೋಮಿನಕೊಪ್ಪ ಗ್ರಾಮಸ್ಥರ ಅಗ್ರಹ

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಆಲ್ದಳ್ಳಿ ಸೋಮಿನಕೊಪ್ಪ ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಕಳಪೆ ಚಿಕಿತ್ಸೆಯನ್ನು ನೀಡುತ್ತಿರುವ ಬಗ್ಗೆ ವೈದ್ಯಾಧಿಕಾರಿ ವಾಣಿ ಪಿ.ಕೆ. ಅವರ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ವರ್ಗಾಯಿಸಲು ಶಾಸಕ ಅಶೋಕ್ ನಾಯ್ಕ್ ಅವರಿಗೆ ಗ್ರಾಮಸ್ಥರು ಇಂದು ಮನವಿ ಸಲ್ಲಿಸಿದರು.


ವೈದ್ಯಾಧಿಕಾರಿ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೇ ತಡವಾಗಿ ಬಂದು ಕೆಲಸದ ಸಮಯಕ್ಕಿಂತ ಮುಂಚೆ ಹೊರಟು ಹೋಗುತ್ತಾರೆ. ಹಸುಗಳು ಗರ್ಭಧರಿಸದಿದ್ದರೂ ಗರ್ಭದರಿಸಿದೇ ಎಂದು ತಪ್ಪು ಮಾಹಿತಿ ನೀಡುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.


ಹಸುಗಳನ್ನು ನೋಡಲು ಮನೆಯ ಬಳಿಗೆ ಬಂದರೆ ೨೫೦ ರಿಂದ ೩೦೦ ರೂಗಳನ್ನು ಕೇಳುತ್ತಾರೆ. ಇವರ ನಿರ್ಲಕ್ಷ್ಯದಿಂದ ಸೆ.23ರಂದು ಗ್ರಾಮದ ಮಂಜುನಾಥ್ ಎಂಬುವವರ ಹಸುಗಳು ಸಾವನ್ನಪ್ಪಿವೆ ಎಂದು ಆಕ್ರೋಶ ವ್ಯಕ್ತಪಡಿಸಿದಲ್ಲದೇ. ಈ ರೈತರಿಗೆ ಮೋಸವಾಗಿದೆ ಇವರಿಗೆ ಇದಕ್ಕೆ ಪರಿಹಾರ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.


ಗ್ರಾಮದಲ್ಲಿ ಹಲವು ರೈತರ ಹಸುಗಳಿಗೆ ಮೋಸವಾಗಿದ್ದು, ಈ ವೈದ್ಯಾಧಿಕಾರಿಯ ದರ್ಪ ಖಂಡಿಸಿದ ಗ್ರಾಮಸ್ಥರು, ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸಿ ಉತ್ತಮ ವೈದ್ಯಾಧಿಕಾರಿಯನ್ನು ನೇಮಿಸಲು ಶಾಸಕರಿಗೆ ವಿನಂತಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರಂಗನಾಥ್, ಶಿವರಾಜ್, ಮಂಜುನಾಥ್, ರವಿ, ವರುಣ್ ಸೇರಿದಂತೆ ಹಲವರಿದ್ದರು.

Exit mobile version