Site icon TUNGATARANGA

ಶಿವಮೊಗ್ಗ | ಅಂತೂ ಕ್ಯಾತಿನಕೊಪ್ಪದಲ್ಲಿ ಬೋನಿಗೆ ಬಿತ್ತು ಚಿರತೆ..!

ಶಿವಮೊಗ್ಗ ತಾಲೂಕಿನ ಕ್ಯಾತಿನಕೊಪ್ಪದಲ್ಲಿ ಚಿರತೆಯನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು

ಶಿವಮೊಗ್ಗ: ಕಳೆದ ವಾರದಿಂದ ಶಿವಮೊಗ್ಗ ತಾಲ್ಲೂಕು ಕ್ಯಾತಿನಕೊಪ್ಪದ ತೋಟ ಹಾಗೂ ಮನೆಗಳ ಬಳಿ ಸುತ್ತಾಡುತ್ತಿದೆ ಎನ್ನಲಾದ ಚಿರತೆ ನಿನ್ನೆ ರಾತ್ರಿ ಬೋನಿಗೆ ಬಿದ್ದಿದೆ. ಜನತೆ ನಿರಾಳರಾಗಿದ್ದಾರೆ.
ಅಡಿಕೆ ತೋಟದ ಆವರಣದಲ್ಲಿ ಈ ಚಿರತೆ ಕಳೆದ ತಿಂಗಳಿನಿಂದ ಇಲ್ಲಿ ಸುತ್ತಾಡುತ್ತಿತ್ತು.


ಇಲ್ಲಿನ ತೋಟದ ಮನೆಯಲ್ಲಿ ಸಿದ್ದಪ್ಪರಗ ಮಂಜುನಾಥ್ ಕುಟುಂಬ ವಾಸವಿತ್ತು. ಕ್ಯಾತಿನಕೊಪ್ಪದ ಮೂರಕ್ಕೂ ಹೆಚ್ಚು ನಾಯಿಗಳನ್ನು ಈ ಚಿರತೆ ಬೇಟೆಯಾಡಿತ್ತೆನ್ನಲಾಗಿದೆ.


ಕಳೆದ ನಾಲ್ಕೈದು ದಿನದ ಹಿಂದೆ ಮಂಜುನಾಥ್ ಅವರ ಸಾಕು ನಾಯಿಯನ್ನು ಚಿರತೆ ಹಿಡಿದದ್ದನ್ನು ಗಮನಿಸಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಕಳೆದ ಐದು ದಿನದಿಂದ ಅರಣ್ಯ ಇಲಾಖೆ ಮಂಜುನಾಥ್ ಅವರ ತೋಟದ ಮನೆ ಬಳೆ ಬೋನನ್ನು ಇಟ್ಟಿದ್ದರು.
ನಿನ್ನೆ ರಾತ್ರಿ ಮತ್ತೆ ಬೇಟೆಗೆಂದು ಬಂದಿದ್ದ ಚಿರತೆ ಹತ್ತೂವರೆಯಷ್ಟೋತ್ತಿಗೆ ಬೋನಿಗೆ ಬಿದ್ದಿದೆ. ರಾತ್ರಿಯೇ ಅರಣ್ಯ ಇಲಾಖೆ ಅಧಿಕಾರಿಗಳಾದ ಇನಾಯತ್ ಅವರ ತಂಡ ಚಿರತೆಯನ್ನು ಲಯನ್ ಸಫಾರಿಗೆ ಸಾಗಿಸಿದೆ ಎನ್ನಲಾಗಿದೆ. ಅಂತೂ ಚಿರತೆ ಭಯ ನಿರ್ನಾಮವಾಗಿದೆ.

Exit mobile version