Site icon TUNGATARANGA

ಅ.೦6: ಸಹ್ಯಾದ್ರಿ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾಗಮ: ಡಿ.ಹೆಚ್.ಶಂಕರಮೂರ್ತಿ

ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಅ.೯ ರಂದು ಬೆಳಿಗ್ಗೆ ೧೧ ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇ ಜಿನ ಹಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣ ವಾಗಿ ಮತ್ತು ಕ್ರಿಯಾಶೀಲವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಗೌರವಾ ಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಡಿನ ಪ್ರಮುಖ ವಿದ್ಯಾಸಂಸ್ಥೆ ಗಳಲ್ಲಿ ಸಹ್ಯಾದ್ರಿ ಕಾಲೇಜಿಗೆ ಮಹತ್ವದ ಸ್ಥಾನವಿದೆ. ೧೯೪೧ರಲ್ಲಿ ಆರಂಭವಾದ ಸಹ್ಯಾದ್ರಿ ಕಾಲೇಜಿಗೆ ಈಗ ೮೦ರ ಹರೆಯ. ಅಂದಿನ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯವರಾದ ದಿವ್ಯ ಹಸ್ತದಿಂದ ಆರಂಭವಾದ ಕಾಲೇಜು ಇಂದಿನವರೆಗೂ ಅತ್ಯಂತ ಗಮನಾರ್ಹ ಕೊಡುಗೆ ನಾಡಿಗೆ ನೀಡಿದೆ ಎಂದರು.


೧೯೫೬ ರಲ್ಲಿ ಸರ್ಕಾರಿ ಪ್ರಥಮ ದರ್ಜಿ ಕಾಲೇಜಾಗಿ ಪರಿವರ್ತನೆಗೊಂಡು ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಆಡಳಿತಾತ್ಮಕ ಕಾರಣದಿಂದಾಗಿ ೧೯೮೪ರಲ್ಲಿ ಕಲಾ ಮತ್ತು ವಿಜ್ಞಾನ ಕಾಲೇಜು ಎಂದು ಬೇರೆ ಬೇರೆ ಕಾಲೇಜುಗಳಾಗಿ ವಿಭಜನೆಗೊಂಡಿತ್ತು. ಕುವೆಂಪು ವಿಶ್ವವಿದ್ಯಾನಿಲಯ ಈ ೨ ಕಾಲೇಜನ್ನು ತನ್ನ ಘಟಕ ಕಾಲೇಜುಗ ಳನ್ನಾಗಿ ಪರಿವರ್ತಿಸಿಕೊಂಡಿದೆ. ಇಂದಿಗೂ ವಿಜ್ಞಾನ ಕಾಲೇಜು ತನ್ನ ಗುಣಮಟ್ಟದಲ್ಲಿ ಸಾಕಷ್ಟು ಬೆಳೆದು ರಾಜ್ಯ ಮತ್ತು ರಾಷ್ಟ್ರೀಯ ಹಾಗೂ ಅಂತ ರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಇಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡುವುದರ ಮೂಲಕ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರು ಹಲವರಿದ್ದಾರೆ ಎಂದರು.


ಭಾರತ ರತ್ನ ಪ್ರೊ.ಸಿ.ಎನ್.ರಾವ್, ದಿ.ಡಾ.ಕೆ. ಅಶೋಕ್ ಪೈ., ಡಾ.ಬಿ.ಎನ್.ಸುರೇಶ್, ಜಿ.ಎಸ್.ಶಿವ ರುದ್ರಪ್ಪ, ಕೆ.ಎಸ್.ನಿಸಾರ್‌ಅಹಮ್ಮದ್, ಪ್ರೊ.ಯು. ಆರ್. ಅನಂತಮೂರ್ತಿ, ಪಿ.ಲಂಕೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ, ಡಾ.ಹಾ.ಮಾ.ನಾಯ್ಕ್, ರಾಜಕೀಯ ಮುತ್ಸದ್ಧಿಗಳಾದ ಶಾಂತವೇರಿ ಗೋಪಾಲ ಗೌಡ, ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ, ಡಿ.ಹೆಚ್.ಶಂಕರಮೂರ್ತಿ, ಕೋಣಂದೂರ್ ಲಿಂಗಪ್ಪ, ಕೆ.ಹೆಚ್. ಶ್ರೀನಿವಾಸ್, ಹೆಚ್.ಜಿ. ಗೋವಿಂದೆಗೌಡ, ಜಸ್ಟಿಸ್ಗಳಾದ ರಾಮಜೋಯಿಸ್, ಎನ್.ಡಿ.ವೆಂಕಟೇಶ್ ಸೇರಿದಂತೆ ಹಲವಾರು ಸಾಧಕರು ತಾವು ಬೆಳೆದು ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ತಾವು ಓದಿದ ಕಾಲೇಜಿನ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ಸಂಘದ ಅಧ್ಯಕ್ಷೆ ಹಾಗೂ ಪ್ರಾಂಶುಪಾಲೆ ಪ್ರೊ.ಹೆಚ್.ಎಂ.ವಾಗ್ದೇವಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ನಾಗರಾಜ್ ಪರಿಸರ, ಉಮೇಶ್ ಶಾಸ್ರ್ತಿ, ಡಾ.ಕೆ.ಪಿ.ಲತಾ, ಡಾ.ಕೆ.ಎಲ್. ನಾಯಕ್, ಪಿ.ಜೇಸುದಾಸ್, ನಾಗರಾಜ್ ನೇರಿಗೆ ಉಪಸ್ಥಿತರಿದ್ದರು.

Exit mobile version