Site icon TUNGATARANGA

ಶಿವಮೊಗ್ಗ ಅಪರಾಧಗಳ ತವರೂರು: ಕೆ.ಬಿ.ಪ್ರಸನ್ನಕುಮಾರ್


ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ದಲ್ಲಿ ಅಪರಾಧಗಳು ಹೆಚ್ಚಾಗುತ್ತಿದ್ದು, ಜನ ಭಯಭೀತರಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕಳವಳ ವ್ಯಕ್ತಪಡಿ ಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಶಿವಮೊಗ್ಗ ಮಲೆನಾಡಿನ ಸಾಂಸ್ಕೃತಿಕ ಕೇಂದ್ರವೇ ಆಗಿದ್ದು, ಇಂತಹ ಊರಿನಲ್ಲಿ ಇತ್ತೀಚೆಗೆ ಅಪರಾಧ ಚಟುವಟಿ ಕೆಗಳು ಹೆಚ್ಚಾಗುತ್ತಿವೆ. ಕೊಲೆ, ದರೋಡೆ, ಹಲ್ಲೆ, ಗಾಂಜಾ ಸೇವನೆ, ಸರಗಳ್ಳತನ ಮುಂತಾ ದವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ಗೋಪಾಲಗೌಡ ಬಡಾವಣೆಯಲ್ಲಿ ಬೆಳ್ಳಂಬೆಳಗ್ಗೆಯೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಸರ ದೋಚಿದ್ದಾರೆ. ರವೀಂದ್ರನಗರ, ವಿದ್ಯಾನಗರ ಮುಂತಾದ ಕಡೆಗಳಲ್ಲೂ ಸರ ಅಪಹರಣ ಪ್ರಕರಣ ಗಳು, ಮೊಬೈಲ್ ಕಳ್ಳತನಗಳು ನಡೆಯು ತ್ತಿವೆ. ಮನೆ ಮುಂದೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೆ ಕಸಿದುಕೊಂಡು ಹೋಗುತ್ತಿದ್ದಾರೆ ಎಂದರು.


ಗಾಂಜಾದ ಹಾವಳಿ ಹೆಚ್ಚಾಗುತ್ತಿದೆ. ಪೊಲೀಸರು ಗಾಂಜಾ ತಡೆಯುವಲ್ಲಿ ವಿಫಲರಾಗಿದ್ದಾರೆ. ರಾತ್ರೋ ರಾತ್ರಿ ಮನೆಗಳ ಬಾಗಿಲು ಬಡಿಯುವುದು, ಕಳ್ಳತನ ಮಾಡುವುದು ಮಾಮೂಲಿ ಯಾಗಿದೆ. ಜೊತೆಗೆ ಹೊಡೆದಾಟಗಳು ನಡೆಯುತ್ತಿದ್ದು, ಟಿಪ್ಪುನಗರ ಸೇರಿದಂತೆ ಹಲವು ಕಡೆ ಕೊಲೆ ಪ್ರಕರಣ ಕೂಡ ವರದಿಯಾಗಿವೆ ಎಂದು ದೂರಿದರು.


ಶಿವಮೊಗ್ಗದ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಕಂಡಿದೆ. ಉಸ್ತು ವಾರಿ ಸಚಿವರು ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಅವರಿಗೆ ಶಿವಮೊಗ್ಗದಲ್ಲಿ ಅಪ ರಾಧ ವಟುವಟಿಕೆಗಳು ಹೆಚ್ಚುತ್ತಿವೆ ಎಂಬುದೇ ಗೊತ್ತಿಲ್ಲ. ಜಿಲ್ಲೆಯವರೇ ಆದ ಆರಗ ಜ್ಞಾನೇಂದ್ರ ಅವರು ಈಗ ಗೃಹ ಸಚಿವರಾಗಿದ್ದಾರೆ. ಅವರೊಡನೆ ಮಾತ ನಾಡಿ, ಆದಷ್ಟು ಬೇಗ ಶಿವಮೊಗ್ಗದಲ್ಲಿ ಅಪರಾಧಗಳನ್ನು ನಿಯಂತ್ರಿಸಬೇಕು. ಜನರು ನೆಮ್ಮದಿಯಿಂದ ಜೀವನ ಮಾಡು ವಂತೆ ವಾತಾವರಣವನ್ನು ನಿರ್ಮಿ ಸಬೇಕು. ಮತ್ತು ಪೊಲೀಸ್ ಇಲಾS ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಡಿ. ಮಂಜುನಾಥ್, ಶಾಮಸುಂದರ್, ಜಿತೇಂದ್ರ, ರಂಗನಾಥ್, ದೀಪಕ್ ಸಿಂಗ್ ಇದ್ದರು.

Exit mobile version