Site icon TUNGATARANGA

ಕನಕದಾಸರ ಅಧ್ಯಯನ ಕೇಂದ್ರದ ಸದಸ್ಯರಾಗಿ ಡಾ. ಶುಭಮರವಂತೆ ಸೇರಿದಂತೆ ಹಲವರ ನೇಮಕ

ಬೆಂಗಳೂರು:
ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾದ್ಯಾಪಕಿ ಡಾ.ಶುಭ ಮರವಂತೆ ಸೇರಿದಂತೆ ಹಲವರನ್ನು ಅಧಿಕಾರೇತರ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಈ ಕುರಿತು ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ, ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ದೈನಂದಿನ ಕಾರ್ಯಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ಅನುಷ್ಟಾನಗಳ ದೃಷ್ಠಿಯಿಂದ ಕಾರ್ಯಾನುಷ್ಠಾನ ಮಂಡಳಿಗೆ ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಸಮಿತಿಯನ್ನ ಪುನರ್ ರಚಿಸಿ ಆದೇಶ ಹೊರಡಿಸಲಾಗಿದೆ.
ರಾಯಚೂರಿನ ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಮೈಸೂರಿನ ಅ.ಮ. ಭಾಸ್ಕರ್, ಮಂಗಳೂರಿನ ಧನಂಜಯ ಕುಂಬ್ಳೆ, ಮೈಸೂರಿನ ಜ್ಯೋತಿ ಶಂಕರ್, ಬೆಂಗಳೂರಿನ ಡಾ. ಎನ್.ಆರ್ ಲಲಿತಾಂಬಾ , ಅವರನ್ನ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

Exit mobile version