Site icon TUNGATARANGA

ಓದುಗರಿಗಾಗಿ, ಸ್ಮಾರ್ಟ್‌ಸಿಟಿ ಕಾಮಗಾರಿಯೊಳಗಿನ ಕಳಪೆ, ಆಮೆ ನಡಿಗೆಯ ಮಾಹಿತಿ ನೀಡಿ…,

ಸಾರ್ವಜನಿಕವಾಗಿ ಜನದ್ವನಿ ಬಹಿರಂಗಕ್ಕೆ ಮುಂದಾದ ನಿಮ್ಮ “ತುಂಗಾತರಂಗ”

ಶಿವಮೊಗ್ಗ, ಸೆ.20:
ಶಿವಮೊಗ್ಗ ಸ್ಮಾರ್ಟ್‌ಸಿಟಿ ಹೆಸರಿನ ಕಾಮಗಾರಿ ಅದ್ಯಾವ ಭಗವಂತನಿಗೆ ಇಷ್ಟವಾಗುತ್ತೀವೆಯೋ ಗೊತ್ತಿಲ್ಲ. ಮಹಾನಗರ ಪಾಲಿಕೆ ಆವರಣವನ್ನು ಸುಂದರ ಮಾಡಲು ಕೋಟ್ಯಾಂತರ ರೂ. ಹಣ ಬಳಸುತ್ತಿದ್ದಾರೆ. ಇಡೀ ಸ್ಮಾರ್ಟ್ ಸಿಟಿಯ ಎಲ್ಲಾ ಕಾಮಗಾರಿಗಳನ್ನು ನೆಪಮಾತ್ರಕ್ಕೆ ಎಂಬಂತೆ ಶುರು ಹಚ್ಚಿಕೊಂಡಿದ್ದಾರೆ. ಯಾವುದೇ ಒಂದೇ ಒಂದು ಕಾಮಗಾರಿ ಸಂಪೂರ್ಣವಾಗಿಲ್ಲ.


ಶಿವಮೊಗ್ಗ ನಗರದ 17 ವಾರ್ಡ್‌ಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ವಿವರಗಳು ಸ್ಪಷ್ಟವಾಗಿ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಇಡೀ ಕಾಮಗಾರಿಗಳ ಕರ್ಮಕಾಂಡದ ಬಗ್ಗೆ, ವರುಷಗಟ್ಟಲೇ ಉಳಿಸಿಯೇ ಹೋಗಿರುವ ಗುಂಡಿಗಳ ಬಗ್ಗೆ ಕೆ.ಇ.ಬಿ.ಪೈಪ್‌ಲೈನ್ ನೆಪದಲ್ಲಿ ಬೇಕಾಬಿಟ್ಟಿ ತೆಗೆದು ಮುಚ್ಚದಿರುವ ಚರಂಡಿಗಳ ಬಗ್ಗೆ ಇದೇ ಹೆಸರಲ್ಲಿ ನಿತ್ಯ ನಿರಂತರ ಕಟ್ಟಾಗುವ ಕರೆಂಟ್ ಬಗ್ಗೆ ನಿತ್ಯ ನಿರಂತರ ಜನರು ಅದರಲ್ಲೂ ತುಂಗಾ ತರಂಗ ಪತ್ರಿಕೆ ಓದುಗರು ಮಾಡುತ್ತಿರುವ ದೂರುಗಳನ್ನು ಎಳೆ ಎಳೆಯಾಗಿ ಸಾರ್ವಜನಿಕ ಮುಂದೆ ಹಿಡುವ ಚಿಕ್ಕದೊಂದು ಎಚ್ಚರಿಕೆ ಪ್ರಯತ್ನಕ್ಕೆ ತುಂಗಾ ತರಂಗ ಕೈ ಇಡುತ್ತಿದೆ.
ತುಂಗಾ ತರಂಗ ಇಲ್ಲಿ ಸಾರ್ವಜನಿಕ ಅಭಿಪ್ರಾಯಗಳಿಗೆ ಮನ್ನಿಸ್ಸಿ ಸಮಸ್ಯೆಗಳ ಬಗ್ಗೆ ಚಿತ್ರ ಸಹಿತ ವಿವರ ಬಿಚ್ಚಿಡುವ ಪ್ರಯತ್ನ ಮಾಡುತ್ತಿದೆ. ಇಲ್ಲಿ ವಿಶೇಷವಾಗಿ ತಮ್ಮ ತಮ್ಮ ಮನೆ ಅಂಗಡಿ ಮುಂಗಟ್ಟುಗಳ ಮುಂದೆ ಅನುಭವಿಸುತ್ತಿರುವ ನಿತ್ಯ ನರಕಯಾತನೆಯನ್ನು ಹಾಗೂ ಸಮರ್ಪಕವಾಗಿಲ್ಲದ ಗುಂಡಿ, ಗೊಟರುಗಳಿಂದಲೇ ತುಂಬಿರುವ ರಸ್ತೆಗಳಲ್ಲಿ ಹೆಲ್ಮೆಟ್, ಡಿ.ಎಲ್.ನೆಪದಲ್ಲಿ ದಂಡ ವಸೂಲಿ ಮಾಡುವ ಪೊಲೀಸರ ಬಗ್ಗೆ ಒಂದಿಷ್ಟು ಸಾರ್ವಜನಿಕ ಅಕ್ರೋಶ ವಿವರಣೆಯ ಪ್ರಯತ್ನ ಇದಾಗಿದೆ.


ಪತ್ರಿಕೆಯ ಸುದ್ದಿಜಾಡಿನೊಳಗೆ ಸ್ಮಾರ್ಟ್‌ಸಿಟಿ ಕಾಮಗಾರಿಯ ಅವ್ಯವಸ್ಥೆಗಳು, ಕಮಿಷನರ್ ಹಾಗೂ ಸ್ಮಾರ್ಟ್‌ಸಿಟಿ ಎಂ.ಡಿ.ಚಿದಾನಂದ ವಟಾರೆ ಅವರು ಹೇಳಿದರೆ ಮಾತ್ರ ಫೋನ್ ಎತ್ತುವ ಇಂಜಿನಿಯರ್‌ಗಳ ಬಗ್ಗೆ ಒಂದಿಷ್ಟು ಬುಡದ ಮಾಹಿತಿಗಳನ್ನು ಹುಡುಕಿ ಹೊರಹಾಕಲೇ ಬೇಕಿದೆ.
ಓದುಗರು ಇಂತಹ ಸುದ್ದಿಗಳ ಸಮರ್ಪಕ ವಿವರಣೆ ದೊರಕದಿದ್ದಾಗ ಸಹಜವಾಗಿ ತಮ್ಮದೇ ಪತ್ರಿಕೆ ಎಂಬಂತೆ ಮುಲಾಜಿಲ್ಲದೇ ಸುದ್ದಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಪದೇ ಪದೇ ಒತ್ತಾಯಿಸುತ್ತಿದ್ದಾರೆ. ಕಳೆದ ೮ ತಿಂಗಳ ಹಿಂದೆ ನಡೆದ ಗಾರ್ಡ್‌ನ್ ಏರಿಯಾಗಳ ಕಾಂಕ್ರಿಟೀಕರಣ ಕಾಮಗಾರಿ ಈಗಲೂ ಮಳೆ ಬಂದರೆ ಒಳಹೋಗುವ ನೀರಿನ ಗುಂಡಿಗಳನ್ನು ತೆರೆದುಕೊಂಡೇ ಇದೇ ಮುಂದಿನ ಮಳೆಗಾಲ ಸರಿಯಾಗಿ ಬಂದರೆ ಇಲ್ಲಿ ಮಾಡಿರುವ ಎಲ್ಲಾ ದಂಧೆಯ ವ್ಯವಹಾರದ ಕಾಮಗಾರಿಗಳ ಅಸಲಿತನ ಬಹಿರಂಗವಾಗುತ್ತದೆ. ಈ ವರ್ಷವೇ ನೀರು ನಿಂತರೆ ಬಿಲ್ ಮಾಡಿಸಿಕೊಳ್ಳುವುದು ಕಷ್ಟವೆಂಬಂತೆ ಗುಂಡಿಗಳನ್ನು ಹಾಗೆಯೇ ಬಿಟ್ಟು ಮಾಡಿರುವ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸದಿರುವ ಸ್ಮಾರ್ಟ್‌ಸಿಟಿ ಮುಗಿಸದಿರುವ ವರದಿಗಳನ್ನು ವಿವರಿಸಲು, ಭಿತ್ತರಿಸಲು, ಸಾರ್ವಜನಿಕವಾಗಿ ಬಹಿರಂಗಗೊಳಿಸಲು ಓದುಗರ ಸಲಹೆ ಸಹಕಾರ ಅತಿಮುಖ್ಯ.


ನೀವು ಕಂಡ, ನೀವು ಅನುಭವಿಸಿದ ನರಕ ಯಾತನೆಯ, ಆಗದಿರುವ ಕಾಮಗಾರಿಗಳ, ಅದೇಷ್ಟೋ ಜನರು ಬಿದ್ದು ಬಳಲಿರುವ ಬಗ್ಗೆ ನಮಗೆ ಮಾಹಿತಿ ನೀಡಿ.

ಮಾಹಿತಿ ನೀಡಲು ಇಲ್ಲಿ ಸಂಪರ್ಕಿಸಿ

ಸ್ಮಾರ್ಟ್‌ಸಿಟಿ ಕಾಮಗಾರಿಗಳ ಲೋಪಗಳನ್ನು ಬಹಿರಂಗ ಹಾರಾಜು ಮಾಡೋಣ.
ವಾಟ್ಸಪ್ ನಂ.ಗೆ ಮಾಹಿತಿ ನೀಡಿ ಸಂಪರ್ಕಿಸಿ : 7483162573, 8970704994, 8105943169

Exit mobile version