Site icon TUNGATARANGA

ಇಂದು ಶಿವಮೊಗ್ಗದಲ್ಲಿ ಲಸಿಸಿಕಾ ಮೇಳ :ಲಸಿಕಾ ಕೇಂದ್ರದ ವಿವರ- ಅವಕಾಶ ಬಳಸಿಕೊಳ್ಳಿ

ಶಿವಮೊಗ್ಗ, ಸೆ. 17:
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸೆಪ್ಟೆಂಬರ್ 17 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆವರೆಗೆ ಶಿವಮೊಗ್ಗ ನಗರದ ಈ ಕೆಳಕಂಡ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಲಸಿಕೆ ಹಾಕುವ ಲಸಿಕಾ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ನಗರದ ಲಸಿಕೆ ಪಡೆದಿರುವ 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಮೊದಲ/ಎರಡನೇ ಡೋಸ್ ಉಚಿತ ಲಸಿಕೆ ಹಾಕಿಸಿಕೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಲಸಿಕಾ ಕೇಂದ್ರ ವಿವರ : ವಾರ್ಡ್ ನಂ 13 ಕೋಟೆ ಸಮುದಾಯ ಭವನ, ಕೋಟೆ ರಸ್ತೆ, ಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾವಸಾರ ಕ್ಷತ್ರಿಯ ಸಮಾಜ, ಕೋಟೆ. ವಾರ್ಡ್ ನಂ 22 ಸರ್ಕಾರಿ ಶಾಲೆ, ದೊಡ್ಡಪೇಟೆ ಕುಂಬಾರಗುಂಡಿ. ವಾರ್ಡ್ ನಂ.23 ಕಾಳಿಕಾ ಪರಮೇಶ್ವರಿ ಸೊಸೈಟಿ, ಗಾಂಧಿಬಜಾರ್ ಎಡಭಾಗ, ಉರ್ದು ಶಾಲೆ ಟಿಪ್ಪುನಗರ. ವಾರ್ಡ್ ನಂ 31 ಕನ್ನಡ ಶಾಲೆ, ನ್ಯೂ ಮಂಡ್ಲಿ, ತುಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ತುಂಗಾನಗರ. ವಾರ್ಡ್ ನಂ. 24 ಸರ್ಕಾರಿ ಶಾಲೆ ಪದ್ಮ ಟಾಕೀಸ್ ಹತ್ತಿರ. ವಾರ್ಡ್ ನಂ.12 ಬಜಾಜ್ ಸುಪ್ರೀಂ ಮೋಟಾರ್ಸ್, ಶಂಕರಮಠ ರಸ್ತೆ, ಅರ್ಬನ್ ಹೆಲ್ತ್ ಸೆಂಟರ್ ಬಾಪೂಜಿನಗರ. ವಾರ್ಡ್ ನಂ.9 ಮೆಹದಿನಗರ ಮಸೀದಿ. ವಾರ್ಡ್ ನಂ.21 ದುರ್ಗಿಗುಡಿ ಶಾಲೆ. ವಾರ್ಡ್ ನಂ.4 ಅಶೋಕ ಶಾಲೆ, ರಾಗಿಗುಡ್ಡ. ವಾರ್ಡ್ ನಂ.03 ಸರ್ಕಾರಿ ಕನ್ನಡ ಶಾಲೆ ರಾಗಿಗುಡ್ಡ. ವಾರ್ಡ್ ನಂ.32 ಶಾದಿ ಮಹಲ್, ಸವಾಯಿಪಾಳ್ಯ. ವಾರ್ಡ್ ನಂ.27 ಸರ್ಕಾರಿ ಶಾಲೆ, ಆರ್‍ಎಂಎಲ್ ನಗರ, ಸರ್ಕಾರಿ ಶಾಲೆ ವಾದ್ ಎ ಹುದಾ, ಪ್ರಾ.ಆರೋಗ್ಯ ಕೇಂದ್ರ ವಿದ್ಯಾನಗರ. ವಾರ್ಡ್ ನಂ.01 ಸರ್ಕಾರಿ ಶಾಲೆ ನವುಲೆ, ತಮಿಳ್‍ತಾಯ್ ಭವನ, ಜೆ.ಹೆಚ್.ಪಟೇಲ್ ಬಡಾವಣೆ. ಪ್ರಾ.ಆ.ಕೇಂದ್ರ ಬೊಮ್ಮನಕಟ್ಟೆ. ವಾರ್ಡ್ ನಂ 34 ಸಾಗರ ರಸ್ತೆ ಇಂಡಸ್ಟ್ರೀಸ್, ಶರಾವತಿ ಹೈಸ್ಕೂಲ್ ಹರಿಗೆ, ಸರ್ಕಾರಿ ಶಾಲೆ ಮಲ್ಲಿಗೇನಹಳ್ಳಿ. ವಾರ್ಡ್ ನಂ 18 ಪ್ರಾ.ಆರೋಗ್ಯ ಕೇಂದ್ರ ಶ್ರೀರಾಮನಗರ. ವಾರ್ಡ್ ನಂ.10 ಸರ್ಕಾರಿ ಶಾಲೆ ರವೀಂದ್ರನಗರ. ವಾರ್ಡ್ ನಂ.19 ಆಯನೂರು ಗೇಟ್ ಅಂಗನವಾಡಿ. ವಾರ್ಡ್ ನಂ.20 ಸರ್ಕಾರಿ ಶಾಲೆ ಹೊಸಮನೆ. ವಾರ್ಡ್ ನಂ.15 ದುರ್ಗಮ್ಮ ದೇವಸ್ಥಾನ ವಡ್ಡಿನಕೊಪ್ಪ. ವಾರ್ಡ್ ನಂ.16 ಪ್ರಾ.ಆರೋಗ್ಯ ಕೇಂದ್ರ ಸೀಗೆಹಟ್ಟಿ ಓ.ಟಿ.ರಸ್ತೆ. ವಾರ್ಡ್ ನಂ 29 ಸರ್ಕಾರಿ ಶಾಲೆ ಕಾಶಿಪುರ. ವಾರ್ಡ್ ನಂ.06 ಜಿಲ್ಲಾ ತರಬೇತಿ ಕೇಂದ್ರ, ಕುವೆಂಪು ರಸ್ತೆ, ಶಿವಮೊಗ್ಗ. ವಾರ್ಡ್ ನಂ.30 ಸಿಮ್ಸ್ ವೈದ್ಯಕೀಯ ಕಾಲೇಜು, ಬಿ.ಹೆಚ್.ರಸ್ತೆ, ಶಿವಮೊಗ್ಗ. ಇಲ್ಲಿ ಸಾರ್ವಜನಿಕರು ಲಸಿಕೆ ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.

Exit mobile version