Site icon TUNGATARANGA

ತಿಪ್ಪೆ ಸೇರಿದ ಪಾಲಿಕೆ ಆಯುಕ್ತರ ಆದೇಶ? ಜಿಲ್ಲಾ ಸಚಿವರ ಮಾತಿಗಿಲ್ಲಿ ಡೊಂಟ್ ಕೇರ್…!


ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರ ಆದೇಶ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಮಾರ್ಟ್ ಸಿಟಿ ರೂವಾರಿಗಳು ಆದ ಕೆಎಸ್ ಈಶ್ವರಪ್ಪನವರ ಮಾತಿನ ಮಾತಿಗೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಜಗಜ್ಜಾಹೀರಾಗಿದೆ.

ಕಳೆದ ತಿಂಗಳಷ್ಟೇ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯ್ದ ಕಾರ್ಪೊರೇಟರ್‌ಗಳೊಂದಿಗೆ ನಗರಾಭಿವೃದ್ಧಿಯ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದ ಈಶ್ವರಪ್ಪನವರು ಪಾಲಿಕೆಯ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ಅಕ್ರಮವಾಗಿ ಹೂಗಳ ಮಾರಾಟ ಮಾಡುತ್ತಿ ದ್ದನ್ನು ತೆರವುಗೊಳಿಸಲು ಸೂಚಿಸಿದ್ದರು. ಈ ಸಂದರ್ಭ ದಲ್ಲಿ ಪಾಲಿಕೆಯ ಆಯುಕ್ತರು, ಅಧಿಕಾರಿಗಳು ವೀರಾವೇಶದಿಂದ ಕೋಟೆ ಪೊಲೀಸರರನ್ನು ಕರೆಸಿಕೊಂಡು ಬಂದು ತೆರವುಗೊಳಿಸಲು ಮುಂದಾದರು.
ಆಗ ನಡೆದ ಮಾತಿನ ಚಕಮಕಿ ನಡುವೆ ತೆರವಿಗೆ ಒಪ್ಪದ ವ್ಯಾಪಾರಸ್ಥರಿಗೆ ಎಚ್ಚರಿಕೆಯ ನೋಟಿಸ್ ಜಾರಿಗೊಳಿಸಿದ ಆಯುಕ್ತರ ನಿಲುವಿಗೆ ಹಾಗೂ ಕೆಎಸ್ ಈಶ್ವರಪ್ಪನವರ ಮಾತಿಗೆ ಎರಡು ತಿಂಗಳಾದರೂ ವ್ಯಾಪಾರಸ್ಥರು ಕ್ಯಾರೇ ಎನ್ನುತ್ತಿಲ್ಲ.


ನಮ್ಮ ಆಡಳಿತ ವ್ಯವಸ್ಥೆಯಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಾಕತ್ತು ಎಷ್ಟು ಇದೆ ಎಂಬುದನ್ನು ಇಂದೂ ಸಹ ಸಂಪೂರ್ಣ ರಸ್ತೆಯ ಕಾಮಗಾರಿಯಲ್ಲಿ ತುಂಬಿ ತುಳುಕುತ್ತಿರುವ ರಸ್ತೆಯಲ್ಲಿ ಸಂಧಿ ಮೂಲೆಗಳಲ್ಲಿ ಹೂವಿನ ವ್ಯಾಪಾರ ಮಾಡುತ್ತಿ ದ್ದಾರೆ. ಇಲ್ಲಿ ಗೆದ್ದವರು ಯಾರು..? ಈ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಕೇಳುತ್ತಿದ್ದಾರೆ
ಸ್ಮಾರ್ಟ್ ಸಿಟಿ ಎಂಬ ಘನಂದಾರಿ ಕೆಲಸದಿಂದ ಇಡಿ ಶಿವಮೊಗ್ಗ ನಗರ ಗಬ್ಬೆದ್ದು ಹೋಗಿದೆ ಈ ವ್ಯವಸ್ಥೆಯನ್ನು ನೋಡಿ ಜನರು ಹಿಡಿಶಾಪ ಹಾಕುತ್ತಿರುವುದು ಸರ್ವೇಸಾಮಾನ್ಯವಾಗಿದೆ
ಇಂತಹ ವ್ಯವಸ್ಥೆ ಒಂದೇ ಎರಡೇ….? ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ಪಾಲಿಕೆಯ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ಎಂಡಿ ಆಗಿರುವ ಚಿದಾನಂದರ ಹೆಸರಿಗೆ ಕಳಂಕ ತರುವಂತೆ ವರ್ತಿಸುತ್ತಿದ್ದಾರಾ…? ಇಡೀ ವ್ಯವಸ್ಥೆ ಇಷ್ಟು ಕುಲಗೆಟ್ಟು ಹೋಗಿದ್ದರೂ ಗಮನ ಸತ್ತು ಹೋಗಿದೆ. ಏನಿಲ್ಲ ಏನಿಲ್ಲ… ಆಗುತ್ತೆ ಅಂತ ಹೇಳುತ್ತಲೇ ವರ್ಷಗಟ್ಟಲೆ ದಿನ ತಳ್ಳುತ್ತಿರುವ ಇಂತಹ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮಗೆ ಬೇಕೆ..?
ಜನರ ಸಿಟ್ಟಿನ ಕಟ್ಟೆ ಒಡೆಯುವ ಮುನ್ನ ವ್ಯವಸ್ಥಿತವಾಗಿ ಕೆಲಸ ಮಾಡಿ ಇಲ್ಲವೇ ನಿಮ್ಮ ನಿಮ್ಮ ಮನೆಯಲ್ಲಿ ಇದ್ದುಬಿಡಿ ಎಂಬುದು ಸಾರ್ವಜನಿಕರ ಆಕ್ರೋಶದ ಮಾತು.

Exit mobile version