ತಾಯಿ-ಮಗಳು ಆತ್ಮಹತ್ಯೆ
ಭದ್ರಾವತಿ : ಹೊಸಮನೆ ಪೊಲೀಸ್ ಠಾಣೆ ಭದ್ರಾವತಿ ವ್ಯಾಪ್ತಿಯ ಯಕಿನ್ಸ ಕಾಲೋನಿಯ ವಾಸಿಯಾದ ೩೫ ವರ್ಷದ ಮಹಿಳೆಯೋರ್ವರು ತನ್ನ ಮಗಳಿಗೆ ನೇಣುಹಾಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ದುರಂತದ ಘಟನೆ ನಡೆದಿದೆ.
ತನ್ನ ಗಂಡ ವ್ಯವಹಾರದಿಂದ ಉಂಟಾದ ನಷ್ಟದಿಂದಾಗಿ ಮಾಡಿದ್ದ ಸಾಲವನ್ನು ತೀರಿಸಲು ಕಷ್ಟವಾಗಿರುವ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು 11 ವರ್ಷದ ಮಗಳಾದ ಮಧುಶ್ರೀಯನ್ನು (11) ಸೀರೆಯಿಂದ ಫ್ಯಾನಿಗೆ ನೇಣು ಹಾಕಿ ಸಾಯಿಸಿ ನಂತರ ಸೀರೆಯ ಇನ್ನೊಂದು ತುದಿಗೆ ತಾಯಿ ಸಂಗೀತ (35) ನೇಣು ಹಾಕಿಕೊಂಡು ಸಾವು ಕಂಡಿದ್ದಾರೆಂದು ಹೊಸಮನೆ ಪೊಲೀಸರಿಗೆ ನೋಡಿದ ದೂರಿನಲ್ಲಿ ಹೇಳಲಾಗಿದೆ.
ಮೃತೆಯ ತಂದೆ ಈ ಸಂಬಂಧ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಹೊಸಮನೆ ಮೊಲೀಸ್ ಸಬ್ ಇನ್ಸ್ಪೆಕ್ಟರ್ ತನಿಖೆ ಕೈಗೊಂಡಿದ್ದಾರೆ.
ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ
ಶಿವಮೊಗ್ಗ : ಇಲ್ಲಿನ ಕೆಎಸ್‌ಆರ್‌ಟಿಸಿ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ಚಾಲಕ ಗಂಗಾಧರ್ (46) ಎಂಬವರೇ ನೇಣಿಗೆ ಶರಣಾದ ವ್ಯಕ್ತಿ. ಹೊಸ ಸಿದ್ದಾಪುರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸರ್ಕಾರಿ ಕಚೇರಿಗಳಿಂದಲೇ ಹೆಚ್ಚಿನ ವಿದ್ಯುತ್ ಬಿಲ್ ಬಾಕಿ : ಸುನಿಲ್ ಕುಮಾರ್
ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನೇಣಿಗೆ ಕೊರಳೊಡ್ಡುವ ಮುನ್ನ ಗಂಗಾಧರ್ ತಾನೇ ಹೂವಿನ ಹಾರ ಹಾಕಿಕೊಂಡಿದ್ದಾರೆ. ಹಾರದ ಜೊತೆಗೆ ಹೊಸ ಶರ್ಟ್ ಧರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ : ರೈತ ಆತ್ಮಹತ್ಯೆ
ಸಾಗರ : ತಾಲ್ಲೂಕಿನ ಬೆಳ್ಳಿಕೊಪ್ಪ-ಮಡಸೂರು ಗ್ರಾಮದ 72 ವರ್ಷದ ರೈತ ಮಂಜಪ್ಪ ಎಂಬುವವರು ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗಿದೆ ಕ್ರಿಮಿನಾಶಕ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ.
ಬೆಳ್ಳಿಕೊಪ್ಪ-ಮಡಸೂರು ಗ್ರಾಮದ ರೈತ ಮಂಜಪ್ಪ ಅವರು ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ, ಶುಂಠಿ, ಭತ್ತ ಮತ್ತು ಅಡಿಕೆ ಕೃಷಿಯನ್ನು ಮಾಡು ತ್ತಿದ್ದರು. ಕಳೆದ ಮೂರು ವರ್ಷಗಳಿಂದ ಫಸಲು ಕೈಗೆ ಸಿಕ್ಕದೆ ವಿಪರೀತ ನಷ್ಟ ಅನುಭವಿಸಿದ್ದಾರೆ. ಕಳೆದ ವರ್ಷ ಅಡಿಕೆ, ಶುಂಠಿ ಮತ್ತು ಮೆಕ್ಕೆಜೋಳ ಸಂಪೂರ್ಣ ನಾಶವಾಗಿ ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗಿದೆ ಸಂಕಷ್ಟಕ್ಕೆ ಒಳಗಾಗಿದ್ದರು.
ಈ ವರ್ಷ ಸಹ ವಿಪರೀತ ಮಳೆಯಿಂದಾಗಿ ಮಂಜಪ್ಪ ಅವರು ಸುಮಾರು 3 ಎಕರೆ ಪ್ರದೇಶದಲ್ಲಿ ಹಾಕಿದ್ದ ಅಡಿಕೆ, ಶುಂಠಿ ಮತ್ತು ಮೆಕ್ಕೆಜೋಳಕ್ಕೆ ಕೊಳೆರೋಗ ಬಂದಿತ್ತು. ಅಡಿಕೆಗೆ ಕೊಳೆರೋಗ ಬಂದಿದ್ದರಿಂದ ಅರ್ಧಕರ್ಧ ಅಡಿಕೆ ಉದುರಿ ಹೋಗಿತ್ತು. ಇದರಿಂದ ಮಂಜಪ್ಪ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಬೆಳೆ ಕೈಗೆ ಹತ್ತದೆ, ಸಾಲವನ್ನು ಸಹ ತೀರಿಸಲಾಗದೆ ತೀವ್ರ ನೊಂದುಕೊಂಡಿದ್ದ ಮಂಜಪ್ಪ ಅವರು ಆಗಸ್ಟ್ ೨೮ರಂದು ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೆಳೆಗೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತಮ್ಮ ತಂದೆ ಕೃಷಿಗಾಗಿ ಬೇರೆಬೇರೆ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡಿದ್ದರು. ಬೇರೆಬೇರೆ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ಫಸಲು ನಷ್ಟವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಸಾಲ ತೀರಿಸಲು ಆಗುತ್ತಿಲ್ಲ ಎಂದು ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಗ ಎಂ.ಎಂ.ನಾಗರಾಜ್ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.