Site icon TUNGATARANGA

ಆಲ್ಕೊಳದಲ್ಲಿನ ಪುಷ್ಕರಣಿಯಲ್ಲಿ ಅಪ್ರಾಪ್ತ ಯುವಕ ಸಾವು!

ಶಿವಮೊಗ್ಗ, ಸೆ.05:
ಸಿದ್ದವಾಗುತ್ತಿದ್ದ ಪುಷ್ಕರಣಿಯಲ್ಲಿ ಈಜಲು ಹೋದ ಅಪ್ರಾಪ್ತ ಯುವಕನೊರ್ವನ ಕಾಲುಗಳು ಕೆಸರಲ್ಲಿ ಸಿಲುಕಿ ನೀರಲ್ಲಿ ಮುಳುಗಿ ಸಾವು ಕಂಡ ಘಟನೆ ಈಗಷ್ಟೆ ವರದಿಯಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಈ ಪುಷ್ಕರಣೆಯಲ್ಲಿ ಇಂದು ಸ್ನಾನ ಮಾಡಲು ಹೋದ ಆಲ್ಕೊಳ ನಂದಿನಿ ಬಡಾವಣೆಯ ಕುಮಾರ್ ಎಂಬುವರ ಮಗ ಸಂದೇಶ್ ಸಾವು ಕಂಡ ನತದೃಷ್ಟನಾಗಿದ್ದಾನೆ.


ಪಾಲಿಕೆ ಕೆಲಸದ ನಡುವೆ ಸಲೀಸಾದ ಪ್ರವೇಶಕ್ಕೆ ಅವಕಾಶ ದೊರೆತದ್ದು ಈ ಸಾವಿಗೆ ಕಾರಣ ಎನ್ನಲಾಗಿದೆ.
ಸುಮಾರು ಹತ್ತು ಅಡಿ ಆಳದ ಹೊಂಡದಲ್ಲಿ ಮುಳುಗಿದ್ದ ಸಂದೇಶನ ಶವವನ್ನು ಸ್ಥಳೀಯ ವಿನೋಬನಗರ ಪೊಲೀಸರು ಹಾಗೂ ಸ್ಥಳೀಯರು ತಗೆದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

Exit mobile version