Site icon TUNGATARANGA

ಬಹಿರ್ದೆಸೆಗೆ ತೆರಳಿದ್ದ ಮಗುವಿನ ಶವ ಕೆರೆಯಲ್ಲಿ ಪತ್ತೆ


ಶಿವಮೊಗ್ಗ : ಬಹಿರ್ದೆಸೆಗೆ ತೆರಳಿದ್ದ ಮಗು ಶವವಾಗಿ ಇಂದು ಪತ್ತೆಯಾಗಿರುವ ಘಟನೆ ಜಿಲ್ಲೆ ಗಡಿಭಾಗದ ರಟ್ಟೆಹಳ್ಳಿಯಲ್ಲಿ ಪತ್ತೆಯಾಗಿದೆ.

ಈ ಪ್ರಕರಣದಲ್ಲಿ ಮಗುವಿನ ಕೊಲೆಯ ಶಂಕೆ ವ್ಯಕ್ತವಾಗಿದ್ದು,‌ ಆ30 ರಂದು ಕಾಣೆಯಾಗಿದ್ದ ಮಗು ಬುಧವಾರ ಇಂದು ಬೆಳಿಗ್ಗೆ ಮನೆಯಿಂದ 1 ಕಿಮಿ ದೂರದಲ್ಲಿ ಶವಪತ್ತೆಯಾಗಿದೆ.
ಜಿಲ್ಲೆಯ ಗಡಿಭಾಗದ ರಟ್ಟೆಹಳ್ಳಿಯ ಬಾಲಕ ಸಂಜು ಎಂಬ ನಾಲ್ಕು ವರ್ಷದ ಮಗು ಬಹಿರ್ದೆಸೆಗೆ ಹೋಗಿದ್ದವರು ಮನೆಗೆ ವಾಪಾಸಾಗಿರಲಿಲ್ಲ. ಸಂಜೆಯ ವರೆಗೆ ಹುಡುಕಿದ ಪೋಷಕರು ಕೊನೆಯಲ್ಲಿ ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮನೆಯವರು ಇದೊಂದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದು,

ಪ್ರಕರಣದ ವಿವರ ; ಆ.30 ರಂದು ತಂದೆ ಬಸವರಾಜು ಶುಂಠಿ ನಾಟಿಕೆಲಸಕ್ಕೆ ಹೋದಾಗ ಮನೆಯಲ್ಲಿದ್ದ ಸಂಜು ಮನೆ ಪಕ್ಕದ ಬಯಲಿನಲ್ಲಿ ಬಹಿರ್ದೆಸೆಗೆ ತೆರಳಿದ್ದನು. ಮಗ ಬರುತ್ತಾನೆ ಎಂದು ಕಾದು ಕುಳಿತಿದ್ದ ಮಂಜುಳ ಮಗ 15 ನಿಮಿಷ ಕಳೆದರೂ ಬಾರದ ಹಿನ್ನಲೆಯಲ್ಲಿ ಆತಂಕಗೊಂಡು ಮಾಮೂಲಿ ಬಹಿರ್ದೆಸೆಗೆ ತೆರಳುವ ಜಾಗ ಪರಿಶೀಲಿಸಲು ಮುಂದಾಗಿದ್ದಾರೆ. ಕೆಲಸಕ್ಕೆ ಹೋಗಿದ್ದ ಬಸವರಾಜ್ ಮಗನನ್ನ ಹುಡುಕಲು ಮುಂದಾಗಿದ್ದಾರೆ. ಕೊನೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂದು ಸಂಜು ಬೆಳಿಗ್ಗೆ ಕ್ಕೆ ಹೆಣವಾಗಿ ಪತ್ತೆಯಾಗಿದ್ದಾನೆ.

Exit mobile version