Site icon TUNGATARANGA

ತಂಬಾಕು ದಾಳಿ : ದಂಡ ಸಂಗ್ರಹ


ಶಿವಮೊಗ್ಗ, ಆಗಸ್ಟ್ 25 :
ಆಗಸ್ಟ್ 25 ರಂದು ಸಾಗರ ತಾಲ್ಲೂಕಿನ ಆನಂದಪುರ ಪಟ್ಟಣದಲ್ಲಿ ಕೋಟ್ಪಾ(sಸಿಗರೇಟ್ ಮತ್ತು ಇತರೆ ಉತ್ಪನ್ನಗಳ ಕಾಯ್ದೆ 2003) ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ದ ದಾಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ದಾಳಿ ವೇಳೆ ಕೋಟ್ಪಾ ಕಾಯ್ದೆ ಉಲ್ಲಂಘನೆಯ 35 ಪ್ರಕರಣಗಳನ್ನು ದಾಖಲಿಸಿ ಸ್ಥಳದಲ್ಲಿಯೇ
ರೂ. 4,450/-ದಂಡ ಸಂಗ್ರಹಿಸಲಾಯಿತು. ದಾಳಿಯ ನೇತೃತ್ವವನ್ನು ತಾಲ್ಲೂಕು ಅರೋಗ್ಯ ಅಧಿಕಾರಿಳು ವಹಿಸಿದ್ದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರು, ಸಮಾಜ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Exit mobile version