Site icon TUNGATARANGA

ರಾಂಪುರದ ಶ್ರೀಗಳು ಇನ್ನಿಲ್ಲ


ಶಿವಮೊಗ್ಗ, ಜು.15: ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿ ಬೆರೆತು ಎಲ್ಲರೊಳಗೊಂದಾಗಿ ಮಾನವ ಧರ್ಮ ಪಾಲಿಸುತ್ತಿದ್ದ ಹೊನ್ನಾಳಿ ತಾಲ್ಲೂಕಿನ ರಾಂಪುರದ ಶ್ರೀಗಳು ಇನ್ನಿಲ್ಲ.
ಇದು ಅರಗಿಸಿಕೊಳ್ಳಲಾಗದ ಸತ್ಯ. ಉಸಿರಾಟದ ಸಮಸ್ಸೆಯ ಜೊತೆ ಕಳೆದ ಎರಡು ದಿನದಿಂದ ಕರಾಳ ಕೊರೊನಾ ಮಹಾಮಾರಿಗೆ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಇಂದು ಸಂಜೆ ನಮ್ಮನ್ನಗಲಿದ್ದಾರೆ.
ಭಕ್ತಿ ಪ್ರಧಾನ ಹಾಗೂ ಬದುಕಿನ ಚೌಕಟ್ಟಿನ ಬಗ್ಗೆ ಜಾತಿಬೇಧ, ಧರ್ಮ, ಅಂತಸ್ತಿನ ಬೇಧವಿಲ್ಲದೇ ತಮ್ಮದೇ ಆದ ವಿಶೇಷ ಸಲಹೆ ನೀಡುತ್ತಿದ್ದ ಶ್ರೀಗಳ ಅಗಲಿಕೆ ನುಂಗಲಾರದ ತುತ್ತಾಗಿದೆ.
ರಾಂಪುರದ ಮಠಾಧೀಶರಾದ ಹಾಲಸ್ವಾಮಿ ಅವರು ಕೊರೊನಾ ಸೋಂಕಿನಿಂದ ಕಳೆದ ಎರಡುದಿನದ ಹಿಂದೆ ಇಲ್ಲಿನ ಮೆಗ್ಗಾನ್ ಆಸ್ಪತ್ರೆ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದರು.ಹಲವು ದಿನಗಳಿಂದ ತೀವ್ರ ತರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದ ಶ್ರೀಗಳು ಭಕ್ತರು ಎಷ್ಟೇ ವಿನಂತಿಸಿದರೂ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು.
ಶ್ರೀಗಳ ಅಗಲಿಕೆಗೆ ನಿಮ್ಮ ತುಂಗಾತರಂಗದ ಕಂಬನಿಗಳು. ಇದುವೇ ಅವರಿಗೆ ಸಲ್ಲಿಸುವ ಅಕ್ಷರ ಕಂಬನಿ.

Exit mobile version