Site icon TUNGATARANGA

ಶಿವಮೊಗ್ಗ : ಆ.17 ರಂದು ಪ್ರಧಾನಿ ಮೋದಿಯರ ಕಲ್ಪನೆಯ ಜನಾಶೀರ್ವಾದ ಯಾತ್ರೆ

ಶಿವಮೊಗ್ಗ : ಪ್ರಧಾನಿ ಮೋದಿಯರ ಕಲ್ಪನೆಯ ಜನಾಶೀರ್ವಾದ ಯಾತ್ರೆ ಆ.17 ರಂದು ನಗರದಲ್ಲಿ ನಡೆಯಲಿದ್ದು, ಕೇಂದ್ರ ಮಾಹಿತಿ ತಂತ್ರಜಾ್ಞನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ರಾಜೀವ್ ಚಂದ್ರಶೇಖರ್ ಇದರ ನೇತೃತ್ವ ವಹಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.16 ರಂದು ರಾತ್ರಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ನಗರಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಕೇಂದ್ರದ ಯೋಜನೆಗಳನ್ನು ಪರಿಚಯಿಸುವ ಮತ್ತು ಯೋಜನೆಗಳ ಕುರಿತು ಪ್ರಬುದ್ಧರೊಂದಿಗೆ ಸಮಾಲೋನೆ ನಡೆಸುವುದು, ಕೆಲವು ಯೋಜನೆಗಳ ಫಲಾನುಭವಿಗಳ ಅನುಭವ ಹಂಚಿಕೊಂಡು ಅವರಿಂದಲೂ ಮಾಹಿತಿ ಪಡೆಯಲಾಗುತ್ತದೆ ಎಂದರು.

ಆ.17 ರಂದು ಬೆಳಗ್ಗೆ 7. 30ಕ್ಕೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ. ಕೊರೋನ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡಿದ ಅಶೋಕ ರಸ್ತೆಯ ನಾಗೇಶ್ ಮನೆಗೆ 8 ಗಟೆಗೆ ಭೇಟಿ ನೀಡಿ ಅವರ ಪೋಷಕರಿಗೆ ಧನ್ಯತೆ ಸಮರ್ಪಣೆ ಮಾಡಲಿದ್ದಾರೆ. 9 ಗಂಟೆಗೆ ಬೆಕ್ಕಿನ ಕಲ್ಮಠದಲ್ಲಿ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಆದಿಚುಂಚನಗಿರಿ ಶ್ರೀ, ಆರ್ಯ ಈಡಿಗ ಮಠದ ಶ್ರೀ, ಜೈನ ಮಠದ ಶ್ರೀ ಹೀಗೆ ವಿವಿಧ ಮಠಗಳ ಶ್ರೀಗಳೊಂದಿಗೆ ಸಮಾಲೋನೆ ನಡೆಸಲಿದ್ದಾರೆ ಎಂದರು.

ಕೃಷಿ ಸಬ್‌ಸಿಡಿಗಳನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ವಿರೋಧ ಪಕ್ಷಗಳು ರೈತರ ದಿಕ್ಕು ತಪ್ಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಕ್ಕಿನ ಕಲ್ಮಠದ ಬಳಿ ಇರುವ ಗೊಬ್ಬರದ ಅಂಗಡಿಗೆ ಭೇಟಿ ನೀಡಿ ರೈತರು ಹಾಗೂ ಅಂಗಡಿ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆಯಲಿದ್ದಾರೆ ಎಂದರು. ಬೆಕ್ಕಿನ ಕಲ್ಮಠ ವೃತ್ತದಿಂದ 50 ಬೈಕ್‌ಗಳೊಂದಿಗೆ ತೆರದ ವಾಹನದಲ್ಲಿ ಶಿವಪ್ಪನಾಯಕ ವೃತ್ತದವರೆಗೆ ಸಚಿವರ ಮೆರವಣಿಗೆ ನಡೆಯಲಿದ್ದು, ಶಿವಪ್ಪನಾಯಕ , ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸಬವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ. 9.30ಕ್ಕೆ ಗಾಡಿಕೊಪ್ಪದಲ್ಲಿ ಆಯೋಜಿಸುವ 2 ಸಾವಿರ ರೂ. ಸಹಾಯ ಧನದ ಸೌಲಭ್ಯ ಪಡೆದ ಫಲಾನುಭವಿಗಳ ಸಭೆಯಲ್ಲಿ ಪಾಲ್ಗೊಂಡು ಅವರ ಅನಿಸಿಕೆಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

ಹರ್ಷ ಫರ್ನ್ ಹೋಟೆಲ್‌ನಲ್ಲಿ 9.45 ಕ್ಕೆ ಆಯೋಜಿಸುವ ಕೃಷಿ, ಉದ್ಯಮ, ಉದ್ಯಮಕ್ಕೆ ಪೂರಕವಾಗಿ ಮಾಹಿತಿ ನೀಡುವ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಂಡು ಅವರಿಂದ ಸಲಹೆ ಸ್ವೀಕಾರ ಮಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ಜನಾಶೀರ್ವಾದ ಯಾತ್ರೆಯ ಸಭಾ ಕಾರ್ಯಕ್ರಮ ನಡೆಯಲಿದೆ.

ಸಚಿವರಾದ ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಮುಖಂಡರಾದ ಎಂ.ಬಿ. ಭಾನುಪ್ರಕಾಶ್, ಎ.ಎನ್. ನಟರಾಜ್, ಗಿರೀಶ್ ಪಟೇಲ್, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಕೊರೋನಾ ಮಾರ್ಗಸೂಚಿ ಪಾಲನೆಯಲ್ಲಿಯೇ ಮಾಡಲಾಗುತ್ತದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧರ್ಮಪ್ರಸಾದ್, ಬಿ.ಕೆ.ಶ್ರೀನಾಥ್, ಬಿ.ಆರ್. ಮಧುಸೂದನ್, ಶಿವರಾಜ್, ಎನ್.ಡಿ.ಸತೀಶ್, ಜ್ಞಾನೇಶ್ವರ್ ಮತ್ತಿತರರು ಇದ್ದರು.

Exit mobile version