Site icon TUNGATARANGA

ಮೊಹರಂ, ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದ ನೀಡಿರುವ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

ಬೆಂಗಳೂರು:  ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಆ ಕಾರಣ, ಹಬ್ಬಗಳ ಆಚರಣೆ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಮಾರ್ಗಸೂಚಿಗಳನ್ನು  ಸರ್ಕಾರ ಪ್ರಕಟಿಸಿದ್ದು,  ಗಣೇಶ ಹಬ್ಬ, ಮೊಹರಂ ಸೇರಿದಂತೆ ಇತರೆ ಹಬ್ಬಗಳನ್ನು ಆಚರಿಸುವಾಗ ಜನದಟ್ಟಣೆ ಮತ್ತು ಒಗ್ಗೂಡುವಿಕೆಗಳನ್ನು ತಡೆಗಟ್ಟಲು ನಿರ್ಬಂಧಗಳನ್ನು ವಿಧಿಸುವಂತೆ ಸ್ಥಳೀಯ ಆಡಳಿತಕ್ಕೆ ಆದೇಶಿಸಿದೆ.

ಮೊಹರಂ ಹಬ್ಬ ಆಚರಣೆಯ ಮಾರ್ಗಸೂಚಿ ಗಳು

ಗಣೇಶ ಚತುರ್ಥಿ ಹಬ್ಬಕ್ಕೆ ನಿಬಂಧನೆಗಳು


ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ದೇವಸ್ಥಾನ ಅಥವಾ ಮನೆಗಳಲ್ಲಿಯೇ ಆಚರಿಸತಕ್ಕದ್ದು.
ಬೇರೆ ಯಾವುದೇ ಸಾರ್ವಜನಿಕ ಸ್ಥಳ, ಹೊರಾಂಗಣಗಳಲ್ಲಿ ಗೌರಿ- ಗಣೇಶ ಮೂರ್ತಿಯನ್ನು ಪ್ರತಿಸ್ಠಾಪನೆ ಮಾಡುವಂತಿಲ್ಲ.
ಗಣೇಶ ಮೂರ್ತಿಗಳನ್ನು ತರುವಾಗ ಅಥವಾ ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.
ಗಣೇಶ ಚತುರ್ಥಿಯನ್ನು ಆಚರಿಸುವ ದೇವಸ್ಥಾನಗಳನ್ನು ಪ್ರತಿದಿನ ಸ್ಯಾನಿಟೈಸ್‌ ಮಾಡತಕ್ಕದ್ದು.

Exit mobile version