Site icon TUNGATARANGA

ಶಿವಮೊಗ್ಗದಲ್ಲಿ ಮಧ್ಯಾಹ್ನ 2ಕ್ಕೆ ಫುಲ್ ಬಂದ್: ಪೊಲೀಸರಿಂದ ಬೀಳಲಿದೆ ಲಾಠಿ ಏಟು

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್ ಡೌನ್ ಗೆ ಹೊಸ ತಿರುವು ಸಿಕ್ಕಿದ್ದು, ನಾಳೆ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಇತರೆ ವ್ಯಾಪಾರ ವಹಿವಾಟುವಿಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಇಂದು ಬೆಳಿಗ್ಗೆ ನಡೆದ ಲಾಕ್ ಡೌನ್ ಕುರಿತು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಎಲ್ಲಾ ಚಟುವಟಿಕೆಗಳು ಬಂದ್ ಆಗಲಿದ್ದು, ಹಾಫ್ ಲಾಕ್ ಡೌನ್ ಜಾರಿಯಾಗಲಿದೆ.
ಕೃಷಿ ಚಟುವಟಿಕೆ ಹೊರತು ಪಡಿಸಿ, ಪೆಟ್ರೋಲ್ ಬಂಕ್, ಮದ್ಯದಂಗಡಿ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಸೇರಿದಂತೆ ಬ್ಯಾಂಕ್ ಗಳು ಸಹ ಮಧ್ಯಾಹ್ನ 2ರ ವರೆಗೆ ಅವಕಾಶ ನೀಡಲಾಗಿದೆ.
ಬ್ಯಾಂಕ್ ಎಂಪ್ಲಾಯ್ ಗಳು ಐಡಿ ತೋರಿ ಸಂಜೆಯ ನಂತರ ಮನೆಗೆ ಹೋಗಬಹುದು. ಕೃಷಿಗೆ ಯಾವುದೇ ನಿರ್ಬಂಧವಿಲ್ಲ.
ಕೈಗಾರಿಕೆಗಳಿಗೆ ಎರಡು ಶಿಫ್ಟ್ ನಲ್ಲಿ ಕೆಲಸಕ್ಕೆ ಅವಕಾಶವಿದ್ದು, ಅಗತ್ಯವಿರುವ ವಸ್ತುಗಳಾದ ಹಾಲಿನ ಅಂಗಡಿ, ದಿನಸಿಗಳು ಬೆಳಿಗ್ಗೆ 5 ಗಂಟೆ ಯಿಂದ ಅವಕಾಶಗಳಿವೆ. ಮದುವೆಗೆ ಅವಕಾಶವಿಲ್ಲ. ಪೊಲೀಸರಿಗೆ ಫುಲ್ ಪವರ್ ನೀಡಲಾಗಿದೆ. ಭದ್ರಾವತಿ, ಸಾಗರ ಸೊರಬ ಸೇರಿದಂತೆ ಎಲ್ಲಾ ತಾಲೂಕಿನಲ್ಲಿ ಗುಂಪು ಸೇರಿದರೆ ಪೊಲೀಸ್ ಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದರು.
ಕಾರ್ಖಾನೆಯ ಕಾರ್ಮಿಕರಿಗೆ ಐಡಿ ಕಡ್ಡಾಯ. ಐಡಿ ತೋರಿದರೆ ಮಾತ್ರಾವಕಾಶ, ಹಬ್ಬ ಹರಿದಿನಗಳು ಸಾಮೂಹಿಕವಾಗಿ ಮಾಡುವಂತಿಲ್ಲ. ಸಂಜೆ ಪತ್ರಿಕೆಗಗಳಿಗೆ ಹಂಚಲು ಅವಕಾಶವಿಲ್ಲ, ಬೆಳಿಗ್ಗ ಹಂಚಲು ಅವಕಾಶನೀಡಲಾಗಿದೆ ಎಂದು ಹೇಳಿದರು.

Exit mobile version