ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಗೃಹ ಸಚಿವರನ್ನಾಗಿ ಆರಗ ಜ್ಞಾನೇಂದ್ರ ಅವರನ್ನು ನೇಮಕ ಮಾಡಲಾಗಿದೆ.
ಹಣಕಾಸು ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.
ಅಶೋಕ್ ಅವರಿಗೆ ಕಂದಾಯ ಇಲಾಖೆಯ ಹೊಣೆ ನೀಡಲಾಗಿದೆ. ಹಿರಿಯ ಸಚಿವರಿಗೆ ಹಿಂದೆ ನಿರ್ವಹಿಸುತ್ತಿದ್ದ ಖಾತೆಯನ್ನೇ ನೀಡಲಾಗಿದೆ. ಶ್ರೀರಾಮುಲು ಅವರಿಗೆ ಸಾರಿಗೆ ಖಾತೆ ನೀಡಲಾಗಿದ್ದು, ಸೋಮಣ್ಣ ಅವರಿಗೆ ವಸತಿ ಖಾತೆ, ಸಿಸಿ ಪಾಟೀಲ್ ಗೆ ನೂತನ ಪೌರಾಡಳಿತ ಜವಾಬ್ದಾರಿ ನೀಡಲಾಗಿದೆ