ಬೆಂಗಳೂರು,ಆ.06:
ಕೊರೋನಾ ಆತಂಕದ ನಡುವೆಯೂ ಕಳೆದ ಜು.19 ಮತ್ತು 22 ರಂದು ಎರಡು ದಿನ ಯಶಸ್ವಿಯಾಗಿ ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ( SSLC Exam Result ) ನಾಳೆ ಪ್ರಕಟವಾಗುವುದಿಲ್ಲ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿ ತಿಳಿಸಿದೆ.
ನಾಳೆ ಫಲಿತಾಂಶ ಪ್ರಕಟವಾಗಲಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿತ್ತು.
ಆದರೆ,ಆಗಸ್ಟ್ 7ರ ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ( SSLC Exam ) ಫಲಿತಾಂಶ ಪ್ರಕಟವಾಗೋದಿಲ್ಲ ಎಂಬುದಾಗಿ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ( Karnataka Secondary Education Examination Board ) ಸ್ಪಷ್ಟ ಪಡಿಸಿದೆ.
ಈ ಕುರಿತಂತೆ SSLC ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲಾ ಅವರು ಮಾಹಿತಿ ನೀಡಿದ್ದು, ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಂತ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.
ಕುರಿತಂತೆ ಸದ್ಯದಲ್ಲೇ ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ನಾಳೆ ಪ್ರಕಟಗೊಳ್ಳಲಿದೆ ಎಂಬುದಾಗಿ ಹೇಳಲಾಗುತ್ತಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ, ಮುಂದೂಡಿಕೆಯಾದಂತೆ ಆಗಿದೆ.
ಕೊರೋನಾ 2ನೇ ಅಲೆಯ ಆರ್ಭಟದ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಜು19 ಮತ್ತು 22ರಂದು ಬಹು ಆಯ್ಕೆ ಮಾದರಿಯಲ್ಲಿ ನಡೆಸಲಾಗಿತ್ತು. ಈ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತದೆ ಎಂಬುದಾಗಿ ಹೇಳಲಾಗಿತ್ತು. ನಾಳೆ ಪ್ರಕಟಗೊಳ್ಳುವುದಿಲ್ಲ ಎಂಬುದಾಗಿ ಎಸ್ ಎಸ್ ಎಲ್ ಸಿ ಬೋರ್ಡ್ ಸ್ಪಷ್ಟ ಪಡಿಸುವಮೂಲಕ ಮಕ್ಕಳ ಮನದ ಗೊಂದಲಕ್ಕೆ ತೆರೆ ಎಳೆದಿದೆ.