Site icon TUNGATARANGA

ಮಣಿಪಾಲ್ ಆಸ್ಪತ್ರೆಯ ವೇಳಾಪಟ್ಟಿ ಬದಲು

ಶಿವಮೊಗ್ಗ,ಜು.೧೫:
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಎಲ್ಲಾ ಹೊರರೋಗಿ ವಿಭಾಗ ಸೇವೆಯು ೧೪ನೇ ಜುಲೈ ೨೦೨೦ರಿಂದ ವಾರದಲ್ಲಿ ಐದು ದಿನ ಮಾತ್ರ, ಬೆಳಿಗ್ಗೆ ಗಂಟೆ ೮.೦೦ ರಿಂದ ಅಪರಾಹ್ನ ೧ ಗಂಟೆಯವರೆಗೆ ಲಭ್ಯವಿರುತ್ತದೆ.
ಎಲ್ಲಾ ಶನಿವಾರ ಮತ್ತು ಭಾನುವಾರ ಹೊರರೋಗಿ ಸೇವೆ ಲಭ್ಯವಿರುವುದಿಲ್ಲ. ಈ ಬದಲಾವಣೆಯು ೩೧ ಜುಲೈ ೨೦೨೦ರ ತನಕ ಮುಂದುವರಿಯಲಿದೆ ಆದಾಗ್ಯೂ ತುರ್ತುಚಿಕಿತ್ಸಾ ವಿಭಾಗ ಶನಿವಾರ, ಭಾನುವಾರ ಮತ್ತು ಎಂದಿನಂತೆ ದಿನದ ೨೪ ಗಂಟೆ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶಶೆಟ್ಟಿ ಅವರು ತಿಳಿಸಿದ್ದಾರೆ.
ವಿವರಗಳಿಗೆ ಅ.ನಾ. ವಿಜಯೇಂದ್ರ ಅವರನ್ನು ಸಂಪರ್ಕಿಸಬಹುದು. ಕರೆ ಸಂಖ್ಯೆ: 94487 90127

Exit mobile version