ಶಿವಮೊಗ್ಗ:
ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಯಾವ ನಿಯಮ ಸರಿಯಾಗಿ ಪಾಲನೆಯಾಗುತ್ತಿದೆ.,? ಇಲ್ಲಿ ಅಧಿಕಾರಿಗಳು ಹಾಗೂ ನೌಕರರು ಮನಸು ಮಾಡಿದರೆ ಎಲ್ಲಾ ಉಲ್ಲಂಘನೆ…!
ದಾಖಲಾತಿಗಳನ್ನು ನೀಡುವಾಗ ಅಥವಾ ಜನನ, ಮರಣ ಪ್ರಮಾಣ ಪತ್ರ ಕೊಡುವಾಗ ನಿಯಮಗಳ ಪಾಲಿಸದೇ ಇರುವುದರ ಜೊತೆಗೆ ಭ್ರಷ್ಟಾಚಾರ ಕೂಡ ನಡೆಯುತ್ತಿದೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರಮಾಣ ಪತ್ರಗಳ ಪಡೆಯಲು ಹಣ ಕೊಡಲೇಬೇಕು ಎಂಬ ದೂರುಗಳು ಕೇಳಿಬರುತ್ತಿವೆ.
ಇದಕ್ಕೆ ಉದಾಹರಣೆ ಎಂದರೆ ಜನನ ಪತ್ರ ನೀಡುವಾಗ ಒಬ್ಬರ ಹೆಸರಿಗೆ ಪ್ರಮಾಣ ಪತ್ರ ನೀಡಿದ್ದು, ಹೆಸರುಗಳನ್ನೇ ಬದಲಾಯಿಸಲಾಗಿದೆ. 14.08.2019 ರಲ್ಲಿ ರಸಿಕ ಆರ್. ಎಂಬ ಮಗುವಿಗೆ ಜನನ ಪ್ರಮಾಣ ಪತ್ರ ನೀಡಲಾಗಿತ್ತು. ಆದರೆ, ಇವರದೇ ಪ್ರಮಾಣ ಪತ್ರವನ್ನು 02.08.2021 ರಲ್ಲಿ ಮತ್ತೆ ಪಡೆಯಲಾಗಿದೆ. ಹೀಗೆ ಪಡೆಯುವಾಗ ರಸಿಕ ಆರ್. ಹೆಸರಿನ ಬದಲು ಆರ್. ತೇಜಸ್ ಎಂದು ಬದಲಾಯಿಸಿಕೊಡಲಾಗಿದೆ.
ಯಾವುದೇ ಹೆಸರನ್ನು ಬದಲಾವಣೆ ಮಾಡಿಕೊಡುವಾಗ ನಿಯಮಗಳನ್ನು ಪಾಲಿಸಬೇಕಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಅರ್ಜಿದಾರರು ನ್ಯಾಯಾಲಯದಿಂದ ಅನುಮತಿ ಪಡೆದು ಹೆಸರು ಬದಲಾಯಿಸಬೇಕು. ಆದರೆ, ಪಾಲಿಕೆ ಅಧಿಕಾರಿಗಳು ಈ ಪ್ರಮಾಣ ಪತ್ರ ಪಡೆಯದೇ ಕಂಪ್ಯೂಟರ್ ನಲ್ಲಿ ನೇರವಾಗಿ ಹೆಸರನ್ನು ತಿದ್ದುಪಡಿ ಮಾಡಿ ಪ್ರಮಾಣ ಪತ್ರ ಕೊಟ್ಟಿದ್ದಾರೆ.
ಅಧಿಕಾರಿಗಳು ಬೇಕೆಂದೇ ಈ ರೀತಿ ಮಾಡುತ್ತಿದ್ದು, ಇಂತಹ ಪ್ರಕರಣಗಳು ಹಲವಾರು ಇವೆ. ಹೀಗೆ ಹೆಸರು ಬದಲಿಸಿ ಪ್ರಮಾಣ ಪತ್ರ ನೀಡುವುದರಿಂದ ಅನೇಕ ಅವ್ಯವಹಾರಗಳು ನಡೆಯುತ್ತವೆ. ಹೀಗೆ ಹೆಸರು ಬದಲಾಯಿಸಿ ಪ್ರಮಾಣ ಪತ್ರ ಪಡೆಯುವವರು ವಂಚಿಸಲೆಂದೇ ಹಣ ಕೊಟ್ಟು ಪಡೆಯುತ್ತಾರೆ.
ಜನನ, ಮರಣ ನೋಂದಣಾಧಿಕಾರಿ ವಿಜಯಲಕ್ಷ್ಮಿ ಅವರನ್ನು ಈ ವಿಚಾರಿಸಿದಾಗ ಉಡಾಫೆಯಾಗಿ ಉತ್ತರ ಕೊಡುತ್ತಾರೆ. ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಹೇಳಿದರೂ ಕೂಡ ನಿರ್ಲಕ್ಷ್ಯ ತೋರುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.