Site icon TUNGATARANGA

ಗಾಂಧಿಬಜಾರಿನಲ್ಲಿ ನಕಲಿ ಪ್ಯಾರಚ್ಯೂಟ್ ಎಣ್ಣೆ ಮಾರಾಟ: ಪೊಲೀಸರಿಂದ ದಾಳಿ – ವಶ

ಶಿವಮೊಗ್ಗ,ಜು.29:
ಬ್ರಾಂಡ್ ವಸ್ತುಗಳನ್ನು ನಕಲಿ ರೂಪದಲ್ಲಿ ಮಾರಾಟಮಾಡುತ್ತಿದ್ದ ಪ್ರಕರಣವನ್ನು ಶಿವಮೊಗ್ಗ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ಪತ್ತೆ ಹಚ್ಚಿದೆ.
ಇಲ್ಲಿನ ಗಾಂಧಿಬಜಾರಿನ ಕುಚಲಕ್ಕಿ ಕೇರಿಯಲ್ಲಿರುವ ಅಂಬಿಕಾ ನಾವೆಲ್ಟೀಸ್ ಮೇಲೆ ಇಂದು ಬೆಳಿಗ್ಗೆ ಕೋಟೆ ಪೊಲೀಸರ ತಂಡ ದಾಳಿ ನಡೆಸಿದೆ.
ಡಿವೈಎಸ್ ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ ಕೋಟೆ ಸಿಪಿಐ ಚಂದ್ರಶೇಖರ್ ಅವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ನಕಲಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಕಲಿ ಪ್ಯಾರಚೂಟ್ ಎಣ್ಣೆ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಗುಮಾನಿ ಮೇಲೆ ಕಂಪನಿಯ ಸಹಭಾಗಿತ್ವದಲ್ಲಿ ಈ ದಾಳಿ ನಡೆದಿದೆ. ಈ ಸಂದರ್ಭದಲ್ಲಿ 22 ಲೀಟರ್ ಎಣ್ಣೆ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ಸಂದರ್ಭದಲ್ಲಿ ಅಂಗಡಿ ಮಾಲೀಕ ಮಹೆಂದರ್ ಪುರಿ ಮೇಲೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಬ್ರಾಂಡೆಡ್ ವಸ್ತುಗಳು ಬಾರೀ ಪ್ರಮಾಣದಲ್ಲಿ ನಕಲಿ ರೂಪದಲ್ಲಿ ಮಾರಾಟವಾಗುತ್ತಿರುವುದು ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ. ಬ್ರಾಂಡೆಡ್ ಹೆಸರಿನ ವಸ್ತು ಹಾಗೂ ಸಾಮಗ್ರಿಗಳ ಖರೀದಿಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಿ ನಕಲಿ ಸರಬರಾಜು ಮಾಡುವ ದೊಡ್ಡ ತಂಡವನ್ನು ಸೆದೆಬಡಿಯುವ ಕೆಲಸವನ್ನು ಆರೋಗ್ಯ ಹಾಗೂ ರಕ್ಷಣಾ ಇಲಾಖೆ ಮಾಡಬೇಕಿದೆ.

Exit mobile version