ಭದ್ರಾವತಿಯಲ್ಲಿ ಮನೆ- ಕಮರ್ಶಿಯಲ್ ನಿವೇಶನ ಮಾರಾಟಕ್ಕಿದೆ.
ಐತಿಹಾಸಿಕ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಎದುರಿನಲ್ಲಿರುವ ಹಾಗೂ ವಾಣಿಜ್ಯ (ಕಮರ್ಷಿಯಲ್) ಬಳಕೆಗೆ ಸೂಕ್ವವಾದ ನಿವೇಶನ ಮಾರಾಟಕ್ಕಿದೆ. ಇದರಲ್ಲಿ ಹೆಂಚಿನ ಮನೆಯಿದ್ದು ವಾಣಿಜ್ಯ ಉದ್ದೇಶಕ್ಕೆ ಸೂಕ್ತವಾಗಿದೆ. ಸುಸಜ್ಜಿತವಾದ ಈ ಮನೆ ಹಾಗೂ ಕರ್ಮಷಿಯಲ್ ನಿವೇಶನ ಕೊಳ್ಳಲಿಚ್ಚಿಸುವವರು ಸಂಪರ್ಕಿಸಿ.
ಮೊ: 89512 37381
ಕೊರೊನಾ ಸೊಂಕು ಐವತ್ತೆಂಟು, ಓರ್ವರ ಸಾವು!
ಶಿವಮೊಗ್ಗ, ಜು.28:
ದಿನೇ ದಿನೇ ಏರಿಳಿತ ಕಾಣುತ್ತಿರುವ ಕೊರೊನಾ ನಿನ್ನೆ ಮುಕ್ಕಾಲು ಶತಕ ಸಮೀಪ ಕೊರೋನ ಪಾಸಿಟಿವ್ ಎಂದು ತಿಳಿಸಿದ್ದ ಜಿಲ್ಲಾ ಹೆಲ್ತ್ ಬುಲಿಟಿನ್ ನ ಇಂದಿನ ವರದಿಯಲ್ಲಿ 58 ಜನರಿಗೆ ಸೋಂಕು ತಗುಲಿದೆ ಎಂದು ತಿಳಿಸಿದೆ.
3915 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 4168 ಜನರಿಗೆ ನೆಗೆಟಿವ್ ಬಂದಿದೆ. ಇದುವರೆಗು ಜಿಲ್ಲೆಯಲ್ಲಿ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ 1040 ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. 01 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
54 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 85 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 22 ಜನ ಸೋಂಕಿನಿಂದ ದಾಖಲಾಗಿದ್ದಾರೆ. 242 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಒಟ್ಟು 41 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ಕಾಲೇಜಿನ ವಿದ್ಯಾರ್ಥಿ/ನಿಯರು ಮತ್ತು ಸಿಬ್ಬಂದಿಗಳನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. ಇವತ್ತು 00 ವಿದ್ಯಾರ್ಥಿ/ನಿಯರನ್ನ ಕೊರೋನ ಟೆಸ್ಟ್ ಗೆ ಒಳಪಡಿಸಲಾಗಿದೆ, 09 ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್ ಬಂದಿದೆ. ಇವತ್ತು 00 ಸಿಬ್ಬಂದಿಗೆ ಕೊರೋನ ಪಾಸಿಟಿವ್ ಬಂದಿದೆ ಎಂದು ಬುಲಿಟಿನ್ ತಿಳಿಸಿದೆ.
ತಾಲೂಕವಾರು ವಿವರ
ಶಿವಮೊಗ್ಗ- 19
ಭದ್ರಾವತಿ -12
ಶಿಕಾರಿಪುರ -00,
ತೀರ್ಥಹಳ್ಳಿ-07
ಸೊರಬ-01,
ಹೊಸನಗರ-10
ಸಾಗರ -01
ಹೊರಜಿಲ್ಲೆ-00
ಜಿಲ್ಲೆಯ ಹಲವು PDO ವರ್ಗ
ಶಿವಮೊಗ್ಗ, ಜು.28;
ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯ 9 ಪಿಡಿಒಗಳನ್ನ ವರ್ಗಾವಣೆ ಮಾಡಲಾಗಿದೆ ಸೊರಬ ತಾಲೂಕಿನ ಹೆಚ್ಚು ಪಿಡಿಒಗಳು ವರ್ಗಾವಣೆ ಗೊಂಡಿದ್ದಾರೆ. ಸೊರಬ ತಾಲೂಕಿನ ನಿಸರಾಣಿ ಗ್ರಾಪಂ ಪಿಡಿಒ ಸುಭಾಷ್ ರಿಗೆ ಶಕುನವಳ್ಳಿ ಗ್ರಾಪಂ ಗೆ, ಎಣ್ಣೆಕೊಪ್ಪ ಪಿಡಿಒ ಸುಮಾರನ್ನ ನಿಸರಾಣಿ ಗ್ರಾಪಂಗೆ, ಇಂಡುವಳ್ಳಿ ಗ್ರಾಪಂನ ಸುದರ್ಶನರನ್ನ ನ್ಯಾರ್ಶಿ ಗ್ರಾಪಂನ ಪಿಡಿಒ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
ನ್ಯಾರ್ಶಿ ಗ್ರಾಪಂನ ಪಿಡಿಒ ಭಾರತಿ ಅವರನ್ನ ಮುಟಗುಪ್ಪೆ ಗ್ರಾಪಂ ಪಿಡಿಒ ಆಗಿ ವರ್ಗಾಯಿಸಲಾಗಿದೆ. ಮುಟಗುಪ್ಪೆಯ ಪಿಡಿಒ ಉಮೇಶ್ ರನ್ನ ಇಂಡುವಳ್ಳಿ ಗ್ರಾಪಂ ಪಿಡಿಒ ಆಗಿ ವರ್ಗಾಯಿಸಲಾಗಿದೆ. ಭದ್ರಾವತಿ ತಾಲೂಕಿನ ಗುಡುಮಗಟ್ಟ ಗ್ರಾಪಂನ ಪಿಡಿಒ ಹನುಮಂತಪ್ಪರನ್ನ ಭದ್ರಾವತಿಯ ಅರಬಿಳಚಿ ಗ್ತಾಪಂನ ಪಿಡಿಒ ಆಗಿ, ಸಾಗರದ ಶಿರವಂತೆ ಗ್ರಾಪಂ ನ ಪಿಡಿಒ ಪ್ರಭು ಇಟಗಿರವರನ್ನ ಆನಂದಪುರಂ ಗ್ರಾಪಂನ ಪಿಡಿಒ ಆಗಿ ವರ್ಗಾಯಿಸಲಾಗಿದೆ.
ಶಿವಮೊಗ್ಗ ಬಿದರೆ ಗ್ರಾಪಂನ ಪಿಡಿಒ ನಾಗಮಣಿ ಆರ್ ಅವರನ್ನ ಅವರ ಸ್ಥಾನದಲ್ಲಿಯೇ ಮುಂದುವರಿಸಲಾಗಿದೆ. ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಪಂ ಪಿಡಿಒ ಸೋಮಶೇಖರ್ ಅವರನ್ನ ಶಿವಮೊಗ್ಗದಲ್ಲಿ ಹೊಸಳ್ಳಿ ಗ್ರಾಪಂನ ಪಿಡಿಒ ಆಗಿ ವರ್ಗಾಯಿಸಲಾಗಿದೆ.
ಪರೀಕ್ಷೆಗೆ ಹೆದರಿದ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಸೊರಬ: ಪರೀಕ್ಷೆ ಎದುರಿಸಲು ಭೀತಿಗೊಳಗಾಗಿ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ನಡೆದಿದೆ.
ನಿತೀನ್ ದಾಸ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಬೆಂಗಳೂರಿನಲ್ಲಿ ಬಿ.ಇ. ಶಿಕ್ಷಣ ಅಧ್ಯಯನ ಮಾಡುತ್ತಿದ್ದು, ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಲ್ಲಿಯೇ ಆನ್ ಲೈನ್ ಶಿಕ್ಷಣ ಪಡೆಯುತ್ತಿದ್ದನು. ಎರಡನೇ ವರ್ಷದ ಬಿ.ಇ. ಪರೀಕ್ಷೆ ಎದುರಿಸುವ ಆತಂಕದಿಂದ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.