Site icon TUNGATARANGA

ಡಿಸಿಸಿ ಬ್ಯಾಂಕ್ ಸದಸ್ಯತ್ವದಿಂದ ಅನರ್ಹಗೊಂಡ ಡಾ. ಆರ್.ಎಂ.ಮಂಜುನಾಥಗೌಡ?!

ಶಿವಮೊಗ್ಗ,ಜು.14: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ನ ಅಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ಡಾ. ಆರ್. ಎಂ. ಮಂಜುನಾಥಗೌಡ ಅವರ ಡಿಸಿಸಿ ಬ್ಯಾಂಕ್ ಸದಸ್ಯತ್ವವನ್ನು ಅನರ್ಹಗೊಳಿಸಿ ಹೆಚ್ಚಿನ ತನಿಖೆಗೆ ಸಹಕಾರ ಇಲಾಖೆ ಇಂದು ಸಂಜೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಸಹಕಾರ ಇಲಾಖೆಯ ಜಂಟಿ ನಿರ್ಧೇಶಕ ಪಾಂಡುರಂಗ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದು ಸಮಗ್ರ ತನಿಖೆಗೆ ಸೂಚಿಸಿದ್ದಾರೆಂದು ತುಂಗಾತರಂಗ ಪತ್ರಿಕೆಗೆ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಬಗ್ಗೆ ಹಿಂದಿನ ಅವ್ಯವಹಾರಗಳ ಕುರಿತು ತನಿಖೆ ಮುಂದುವರೆದಿತ್ತು ಎಂಬುದು ಒಂದು ಕಡೆ ವಾದವಾಗಿದ್ದರೆ, ಮತ್ತೊಂದು ಕಡೆ ಮಂಜುನಾಥಗೌಡರು ಖುಲಾಸೆಯಾಗಿದ್ದರೆಂದು ಹೇಳಲಾಗುತ್ತಿತ್ತು.

Exit mobile version