Site icon TUNGATARANGA

ಯಡಿಯೂರಪ್ಪ ಬದಲಾವಣೆ ವದಂತಿಗೆ ಗ್ರಾಮಾಂತರ ಲಿಂಗಾಯತ ವೀರಶೈವ ಸಮಾಜ ಅಕ್ರೋಶ


ಶಿವಮೊಗ್ಗ, ಜು.೨೧:
ಜಾತಿ, ಧರ್ಮವನ್ನು ಮೀರಿ ರಾಜ್ಯದ ಅಭಿವೃದ್ಧಿಗೆ ಜೀವನವೀಡಿ ದುಡಿಯುತ್ತಿರುವ ರಾಜ್ಯದ ಅಭಿವೃದ್ಧಿ ಹರಿಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಈ ಭಾರಿಯ ಸರ್ಕಾರದ ಅವಧಿ ಮುಗಿಯುವವರೆಗೂ ಬದಲಾಯಿಸಲೇಬಾರದು ಎಂದು ಗ್ರಾಮಾಂತರ ಲಿಂಗಾಯತ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ.ವಿಜಯಕುಮಾರ್ ಒತ್ತಾಯಿಸಿದ್ದಾರೆ.


ಸಮಾಜದ ತುರ್ತು ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವಂತಹ ಹೇಳಿಕೆಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದನ್ನು ತೀಕ್ಷ್ಣವಾಗಿ ಖಂಡಿಸಿರುವ ಅವರು ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಭಾರತೀಯ ಜನತಾ ಪಕ್ಷಕ್ಕಷ್ಟೆ ಅಲ್ಲ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗುತ್ತದೆ. ಅವರ ಬದಲಾವಣೆ ಕುರಿತು ಎದ್ದಿರುವ ವದಂತಿಗಳಿಗೆ ಕೂಡಲೇ ತಿಲಾಂಜಲಿ ಇಡಬೇಕೆಂದು ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದಾರೆ.
ಸಮಾಜದ ಗೌರವಾಧ್ಯಕ್ಷ ಲೋಕೇಶಪ್ಪ ಅವರು ಮಾತನಾಡಿ, ವೀರಶೈವ ಮಠಾಧೀಶರ ಸಹಿತ ರಾಜ್ಯದ ಎಲ್ಲಾ ಧರ್ಮಗುರುಗಳು ಯಡಿಯೂರಪ್ಪ ಧ್ವನಿ ಎತ್ತಿರುವುದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಅನ್ಯ ಪಕ್ಷದ ನಾಯಕರು ಸಹ ಯಡಿಯೂರಪ್ಪ ಪರ ಮಾತನಾಡುತ್ತಿರುವುದನ್ನು ಬಿಜೆಪಿಯ ಪ್ರಮುಖರು ಗಮನಿಸಿ ಕೂಡಲೇ ವದಂತಿಯ ಮಾತುಗಳಿಗೆ ಇತೀಶ್ರೀ ಹಾಡಬೇಕೆಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಸಮಾಜದ ಉಪಾಧ್ಯಕ್ಷರಾದ ಪಿ.ಡಿ.ಮಂಜಪ್ಪ, ರೇವಣ್ಣ, ಕಾರ್ಯದರ್ಶಿ ಮಹೇಶ್, ಖಜಾಂಚಿ ಬಿ.ಟಿ.ಈಶ್ವರಪ್ಪ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Exit mobile version