ರಾಕೇಶ್ ಶಿವಮೊಗ್ಗ
ಶಿವಮೊಗ್ಗ: ನಗರದ ವಾರ್ಡ್ ನಂ.01 ಸೋಮಿನಕೊಪ್ಪ ಭೋವಿ ಕಾಲೋನಿಯ ಮುಖ್ಯ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು, ವಾರ್ಡ್ ನ ಯುವ ಜನರು ನಾಟಿ ಮಾಡುವುದೊಂದೆ ಬಾಕಿ ಉಳಿದಿದೆ.
ಭೋವಿ ಕಾಲೋನಿಗೆ ಹೋಗುವ ಮುಖ್ಯ ರಸ್ತೆ ಕೆಸರಿನಿಂದ ಕೂಡಿದ್ದು, ವಾಹನ ಸವಾರರು, ಪಾದಚಾರಿಗಳು ನಡೆದುಕೊಂಡು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನಡೆದುಕೊಂಡು ಹೋದರೆ ಅರ್ಧ ಅಡಿ ಕಾಲಿನ ಪಾದ ಕೇಸರಿನೊಳಗೆ ಹೂತು ಹೋಗುತ್ತಿದ್ದು, ಜನರು ರಸ್ತೆಯಲ್ಲಿ ಕಷ್ಟ ಪಟ್ಟು ಓಡಾಡುವಂತಾಗಿದೆ. ಈ ರಸ್ತೆಯ ಪಕ್ಕದಲ್ಲಿ ನ್ಯಾಯ ಬೆಲೆ ಅಂಗಡಿ, ಸರ್ಕಾರಿ ಶಾಲೆ ಇದ್ದು, ಶಾಲೆಗೆ ಹೋಗುವ ಮಕ್ಕಳು ಹಾಗೂ ಶಿಕ್ಷಕರು ಮತ್ತು ರೇಷನ್ ತೆಗೆದುಕೊಳ್ಳಲು ಜನರು ಕೇಸರಿನಲ್ಲೆ ನಿಲ್ಲಬೇಕಾದ ಓಡಾಡ ಬೇಕಾದ ಪರಿಸ್ಥಿತಿಯಾಗಿದೆ. ವಾರ್ಡ್ ನ ಸದಸ್ಯರಿಗೆ ಫೋನಾಯಿಸಿದರೂ ಸಹ ಈ ವರೆಗೂ ವಾರ್ಡ್ ನ ಸದಸ್ಯರೇ ಆಗಲೀ ಪಾಲಿಕೆ ಅಧಿಕಾರಿಗಳೇ ಆಗಲೀ ಕ್ರಮಕೈಗೊಳ್ಳದಿರುವುದು ದುರಂತದ ಸಂಗತಿ.
ಕೆಸರು ಗದ್ದೆಯಾಗಿರುವ ಮಣ್ಣನ್ನು ತೆಗೆಸಿ ಡಾಂಬರ್ ಹಾಕಿಸಿ ವಾಹನ ಹಾಗೂ ಜನರ ಓಡಾಟಕ್ಕೆ ಅನವು ಮಾಡಿಕೊಂಡುವಂತೆ ಗ್ರಾಮದ ಯುವಕರು ಆಗ್ರಹಿಸಿದ್ದಾರೆ.
ವಾರ್ಡ್ ಸದಸ್ಯರ ನಿರ್ಲಕ್ಷ್ಯ:
ಭೋವಿ ಕಾಲೋನಿಯ ಸಮಸ್ಯೆಗಳನ್ನು ಸದಸ್ಯರಿಗೆ ಫೋನ್ ಮಾಡಿ ಹೇಳಿದರೂ ಸಹ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮದ ಯುವ ಮುಖಂಡರು ಆರೋಪಿಸಿದ್ದಾರೆ.
ಪಾಲಿಕೆಯ ಒಂದನೇ ವಾರ್ಡಿನ ಅವಾಂತರಗಳ ಬಗ್ಗೆ ಪಾಲಿಕೆ ಸದಸ್ಯರು ಗೊತ್ತಿದ್ದೂ ಗೊತ್ತಿಲ್ಲದಂತೆ ಆಟವಾಡುತ್ತಿದ್ದಾರೆ. ಇಲ್ಲಿಯವರೆಗೆ ಇಲ್ಲಿನ ಅಭಿವೃದ್ದಿಗೆ ಬಳಸಿದ ಲಕ್ಷಾಂತರ ಹಣ ಎಲ್ಲಿ ಯಾರ ಪಾಲಾಯ್ತು…? ಈ ಭಾಗದ ನಿವಾಸಿಗಳು ಸಿಡಿದೇಳಲು ಸಜ್ಜಾಗುತ್ತಿದ್ದಾರೆ. ಇನ್ನಷ್ಟು ನಿಖರ ಮಾಹಿತಿಗಳನ್ನು ಓದಲು ನಿರೀಕ್ಷಿಸಿ.