Site icon TUNGATARANGA

ಮಹಿಳೆ ಮೇಲೆ ಆ್ಯಸಿಡ್ ದಾಳಿ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಶೃಂಗೇರಿ ತಾಲ್ಲೂಕಿನ ಮೆಣಸೆ ಗ್ರಾಮದ ವಿಚ್ಛೇದಿತ ಮಹಿಳೆಗೆ ಆ್ಯಸಿಡ್ ಎರಚಿದ್ದ ಪ್ರಕರಣದಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ, ತಲಾ 5 ಲಕ್ಷ ದಂಡವನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದೆ.
ನ್ಯಾಯಾಧೀಶರಾದ ಮಂಜುನಾಥ ಸಂಗ್ರೇಶಿ ಈ ಆದೇಶ ನೀಡಿದರು.
ದಂಡದ ಮೊತ್ತ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಗರಿಷ್ಠ ಪರಿಹಾರವನ್ನು ಸಂತ್ರಸ್ತೆಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಶೃಂಗೇರಿ ತಾಲ್ಲೂಕಿನ ಮೆಣಸೆಯ ಗಣೇಶ್ ಅಲಿಯಾಸ್ ಗಣಿ (42), ಮಹಮದ್ ಕಬೀರ್ (36), ವಿನೋದ್ ಕುಮಾರ್ (44), ಅಬ್ದುಲ್ ಮಜಿದ್(44) ಶಿಕ್ಷೆಗೆ ಗುರಿಯಾದವರು.

Exit mobile version