Site icon TUNGATARANGA

ತುಂಗಾ ನಾಲೆಗಳಿಗೆ ನೀರು ಬಿಡುಗಡೆ


ಶಿವಮೊಗ್ಗ: ತುಂಗಾ ಅಚ್ಚುಕಟ್ಟು ಯೋಜನೆ ಬಲದಂಡೆ ಮತ್ತು ಬಲದಂಡೆ ನಾಲೆಗಳಿಗೆ ನವೆಂಬರ್ ೩೦ರವರೆಗೆ ನೀರನ್ನು ಹರಿಸಲಾಗುತ್ತಿದ್ದು, ಈ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ರೈತರು ಬೆಳೆಯಬಹುದಾದ ಬೆಳೆಗಳ ವಿವರಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಿಸಿದ್ದು, ರೈತರು ಗಮನಿಸುವಂತೆ ತುಂಗಾ ಮೇಲ್ದಂಡೆ ಯೋಜನಾ ವಿಭಾಗದ ಇಂಜಿನಿಯರ್ ಬಿ.ಪ್ರಕಾಶ್ ಅವರು ತಿಳಿಸಿದ್ದಾರೆ.
ರೈತರು ಸಾಮೂಹಿಕವಾಗಿ ನಿಯಮಿತ ಅವಧಿಯಲ್ಲಿ ಕಡಿಮೆ ಅವಧಿಯ ತಳಿಗಳ ಬಿತ್ತನೆ ಮಾಡಿದಲ್ಲಿ ನೀರಿನ ವಿತರಣೆ ಸುಗಮವಾಗಿ ನೀರಿನ ಶೇಖರಣೆಯಲ್ಲಿ ಉಳಿತಾಯವಾಗಲು ಅನುಕೂಲವಾಗಲಿದೆ. ಇದರಿಂದಾಗಿ ಮುಂದಿನ ಬೆಳೆಗಳಿಗೆ ಸೂಕ್ತವಾಗಿ ನೀರನ್ನು ಒದಗಿಸಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ತರಬಹುದಾಗಿದ್ದು ಸಹಕರಿಸುವಂತೆ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ಅಚ್ಚುಕಟ್ಟಿನಲ್ಲಿ ಗಣನೀಯ ಪ್ರಮಾಣದಲ್ಲಿ ಅರೆ ನೀರಾವರಿ ಬಎಳೆ, ಎಣ್ಣೆಕಾಳುಗಳ ಬೆಳೆಗಳನ್ನು ಬೆಳೆಯುವುದು ಸೂಕ್ತ. ಈ ಬಗ್ಗೆ ಸಂಬಂಧಿಸಿದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿರುವ ಅವರು, ಬೆಳೆ ಮಾದರಿಯನ್ನು ಉಲ್ಲಂಘಿಸಿದವರು, ನೀರಾವರಿ ಕಾಲುವೆ ಮತ್ತು ಕಟ್ಟಡಗಳನ್ನು ಜಖಂಗೊಳಿಸುವವರು, ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ತೆಗೆದುಕೊಳ್ಳುವವರು ಹಾಗೂ ಪ್ರಕಟಣೆಯ ಪ್ರಕಾರ ನೀರು ಹರಿಯುವಿಕೆಯು ನದಿಯಲ್ಲಿ ಆಣೆಕಟ್ಟಿಗೆ ಹರಿದು ಬರುವ ನೀರನ್ನು ಅವಲಂಬಿಸಿರುತ್ತದೆ. ಮಳೆ ಬೀಳುವುದು ಮತ್ತು ನದಿಯಲ್ಲಿ ಆಣೆಕಟ್ಟಿಗೆ ಹರಿದು ಬರುವ ನೀರಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾದಲ್ಲಿ ಸಮಸ್ತ ಅಚ್ಚುಕಟ್ಟುದಾರರಿಗೆ ನೀರಿನ ಲಭ್ಯತೆ ಕಲ್ಪಿಸಲು ಆಂತರಿಕ ಪದ್ದತಿ ಅಳವಡಿಸಿ ಆಂತರಿಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದೆಂದವರು ತಿಳಿಸಿದ್ದಾರೆ.

Exit mobile version