Site icon TUNGATARANGA

ಜುಲೈ 15ರಿಂದ ದ್ವಿತೀಯ ಪಿಯುಸಿ ಆನ್​ಲೈನ್​ ತರಗತಿ ಆರಂಭ: ಹೀಗಿದೆ ವೇಳಾಪಟ್ಟಿ

ಬೆಂಗಳೂರು: ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷವು ಜು. 15ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಬೇಕೆಂದು ಪಿಯು ಬೋರ್ಡ್ ಆದೇಶ ಹೊರಡಿಸಿದೆ.

ಕಳೆದ ವರ್ಷ ಫ್ರೀ ರೆಕಾರ್ಡಿಂಗ್ ಯೂಟ್ಯೂಬ್ ತರಗತಿಗಳನ್ನು ನಡೆಸಲಾಗಿತ್ತು. ಈ ಲಿಂಕ್​ಗಳನ್ನು ವಿದ್ಯಾರ್ಥಿಗಳಿಗೆ ವಾಟ್ಸಪ್​ ಗ್ರೂಪ್​ಗಳ ಮೂಲಕ ಕಳುಹಿಸಲಾಗುತಿತ್ತು.ಈ ಬಾರಿ ಪ್ರತಿ ಕಾಲೇಜಿನ ಉಪನ್ಯಾಸಕರೇ, ಅವರ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿಗಳನ್ನು ನಡೆಸಬೇಕು.

ಉಪನ್ಯಾಸಕರು ಕಡ್ಡಾಯವಾಗಿ ಪಾಠಗಳನ್ನು ನಡೆಸಿ, ಹಾಜರಾತಿಯನ್ನು ತೆಗೆದುಕೊಳ್ಳಬೇಕು. ಪ್ರತಿದಿನದ ಹಾಜರಾತಿ ಮಾಹಿತಿಯನ್ನು ಕಾಲೇಜು ಪ್ರಾಂಶುಪಾಲರಿಗೆ ಕಳುಹಿಸಬೇಕು. ಯಾವುದೇ ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲದಿದ್ದಲ್ಲಿ, ಈ ವಿದ್ಯಾರ್ಥಿಗಳನ್ನು ಹತ್ತಿರದ ಕಾಲೇಜಿನ ಉಪನ್ಯಾಸಕರ ತರಗತಿಗೆ ಸೇರ್ಪಡೆಯಾಗಬೇಕೆಂದು ಇಲಾಖೆ ತಿಳಿಸಿದೆ.

ಬೆಳಗ್ಗೆ 10.00-11.00ರವರೆಗೆ ಮೊದಲ ಅವಧಿ

ಬೆಳಗ್ಗೆ 11.00- 12.00ರವರೆಗೆ ಎರಡನೇ ಆವಧಿ

12.00- 12:30ರವರೆಗೆ ವಿರಾಮ

12.30- 01:30ರವರೆಗೆ ಮೂರನೇ ಅವಧಿ

01.30 – 02.30ರವರೆಗೆ – ನಾಲ್ಕನೇ ಅವಧಿ

Exit mobile version