Site icon TUNGATARANGA

ಪಿಯು ಪರೀಕ್ಷೆ: ಶಿವಮೊಗ್ಗಕ್ಕೆ ಹತ್ತನೇ ಸ್ಥಾನ ಎಂದಿನಂತೆ ಉಡುಪಿಗೆ ಮೇಲುಗೈ

ಬೆಂಗಳೂರು,ಜು.14:ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ರಾಜ್ಯಾದ್ಯಂತ ಶೇ.61.80 ಫಲಿತಾಂಶ ಬಂದಿದೆ.  ಇಂದು ಬೆಳಗ್ಗೆ 11.30 ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಇಲಾಖೆಯ ವೆಬ್ ಸೈಟ್ ನಲ್ಲಿ ಅಧಿಕೃತ ಫಲಿತಾಂಶ ಪ್ರಕಟವಾಗಿದೆ.ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresults.nic.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.1016 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸುಮಾರು 70 ಮೌಲ್ಯಮಾಪನ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದೆ. ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ಹೊಸಬರು 5,56267 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಶಿವಮೊಗ್ಗ ಕಳೆದ ಬಾರಿಯಂತೆ ಈ ಬಾರಿಯೂ ಹತ್ತನೇ ಸ್ಥಾನ ಉಳಿಸಿಕೊಂಡಿದೆ. ಆದರೆ ಶೇಕಡವಾರು ಫಲಿತಾಂಶ ಕಡಿಮೆಯಾಗಿದೆ. ಈ ಬಾರೀ ಶೇ 72.19 ಬಂದಿದೆ. ಕಳೆದಬಾರಿ 73.54 ರಷ್ಟು ಫಲಿತಾಂಶ ಪಡೆದಿತ್ತು.ಕಳೆದ ಬಾರಿಯಂತೆ ಈ ಬಾರಿಯೂ  ಉಡುಪಿ ಮೇಲುಗೈ ಸಾಧಿಸಿದೆ.  ಕಳೆದ ಬಾರಿ 92.20 ಪಡೆದಿದ್ದ  ಉಡುಪಿ ಈ ಬಾರೀ ಶೇ 90.71 ರಷ್ಟು ಪಲಿತಾಂಶ ಪಡೆದಿದೆ.

ಜಿಲ್ಲಾವಾರು ಫಲಿತಾಂಶ

ಉಡುಪಿ – ಶೇ. 90.71
ದಕ್ಷಿಣ ಕನ್ನಡ- ಶೇ.90.71
ಕೊಡಗು- ಶೇ.81.53
ಉತ್ತರ ಕನ್ನಡ- ಶೇ.80.97
ಚಿಕ್ಕಮಗಳೂರು- ಶೇ.79.11
ಬೆಂಗಳೂರು ದಕ್ಷಿಣ- ಶೇ. 77.56
ಬೆಂಗಳೂರು ಉತ್ತರ – ಶೇ.75.54
ಬಾಗಲಕೋಟೆ- ಶೇ.74.59
ಚಿಕ್ಕಬಳ್ಳಾಪುರ- ಶೇ.73.74
ಶಿವಮೊಗ್ಗ- ಶೇ.72.19
ಹಾಸನ – ಶೇ.70.18
ಚಾಮರಾಜನಗರ- ಶೇ.69.29
ಬೆಂಗಳೂರು ಗ್ರಾಮಾಂತರ- ಶೇ.69.02
ಹಾವೇರಿ- ಶೇ.68.01
ಮೈಸೂರು- ಶೇ.67.98
ಕೋಲಾರ ಶೇ.67.42
ಧಾರವಾಡ- ಶೇ.67.31
ಬೀದರ್ – ಶೇ.64.61
ದಾವಣಗೆರೆ- ಶೇ.64.09
ಚಿಕ್ಕೋಡಿ- ಶೇ.63.88
ಮಂಡ್ಯ -ಶೇ.63.82
ಗದಗ – ಶೇ.63
ತುಮಕೂರು- ಶೇ.62.26
ಬಳ್ಳಾರಿ- ಶೇ.62.02
ರಾಮನಗರ- ಶೇ.60.96
ಕೊಪ್ಪಳ- ಶೇ.60.09
ಬೆಳಗಾವಿ- ಶೇ.59.07
ಯಾದಗಿರಿ- ಶೇ.58.38
ಕಲಬುರಗಿ- ಶೇ. 58.27
ಚಿತ್ರದುರ್ಗ- ಶೇ.56.08
ರಾಯಚೂರು- ಶೇ.56.22
ವಿಜಯಪುರ- ಶೇ.54.22

Exit mobile version