ರಾಕೇಶ್ ಶಿವಮೊಗ್ಗ
ಶಿವಮೊಗ್ಗ, ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಅಬ್ಬರದ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ಭಾನುವಾರದಿಂದ ಆರಂಭ ಗೊಂಡ ಮಳೆ ಮೂರು ದಿನಗಳಾದರೂ ಕಡಿಮೆಯಾಗದ ಕಾರಣ ಜನಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯ ನದಿ, ಕೆರೆ, ಹಳ್ಳ, ಕೊಳ್ಳಗಳಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ.
ಕಳೆದ ೨೪ ಗಂಟೆಯಲ್ಲಿ ಹೊಸನಗರ ದಾದ್ಯಂತ ಅತಿ ಹೆಚ್ಚು (೧೪೨.೪೦) ಮಿ.ಮಿ. ಮಳೆಯಾಗಿದ್ದು, ಶಿವಮೊಗ್ಗದಲ್ಲಿ ಅತಿ ಕಡಿಮೆ (೧೮ ಮಿ.ಮೀ.) ಮಳೆಯಾಗಿದೆ. ಇನ್ನುಳಿದಂತೆ ಭದ್ರಾವತಿಯಲ್ಲಿ ೪೮.೨೦ ಮಿ.ಮೀ, ತೀರ್ಥಹಳ್ಳಿಯಲ್ಲಿ ೭೯.೬೦ ಮಿ.ಮೀ, ಸಾಗರದಲ್ಲಿ ೭೦.೮೦ ಮಿ.ಮೀ, ಶಿಕಾರಿಪುರದಲ್ಲಿ ೨೭ ಮಿ.ಮೀ, ಸೊರಬ ದಲ್ಲಿ ೨೯.೨೦ ಮಿ.ಮೀ ಒಟ್ಟಾರೆ ಶಿವ ಮೊಗ್ಗ ಜಿಲ್ಲೆಯಲ್ಲಿ ಸರಾಸರಿ ೫೯.೩೧ ಮಿ.ಮೀ ಮಳೆಯಾಗಿದೆ.
ಉತ್ತಮ ಮಳೆಯಾಗುತ್ತಿರು ವುದರಿಂದ ಜಿಲ್ಲೆಯ ಜೀವನಾಡಿಗಳಾದ ತುಂಗಾ, ಭದ್ರಾ, ಲಿಂಗನಮಕ್ಕಿ, ಜಲಾಶಯಗಳ ಒಳಹರಿವಿನ ಪ್ರಮಾಣ ಏರಿಕೆ ಯಾಗಿದೆ.