ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಇದಕ್ಕೆ ಲಗಾಮು ಹಾಕುವವರೇ ಇಲ್ಲವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಮುಖ್ಯ ಮಂತ್ರಿಯಿಂದ ಹಿಡಿದು ಪಕ್ಷದ ಸಾಮಾನ್ಯ ಕಾರ್ಯಕರ್ತನವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಯಾವುದೇ ಹೊಸ ಯೋಜ ನೆಗಳು ಬಂದರೂ ಕೂಡಾ ಕಿಕ್‌ಬ್ಯಾಕ್ ಸಿದ್ಧವಾಗಿಯೇ ಇರುತ್ತದೆ. ಶೇ.೨೦ರಷ್ಟು ಗುಣ ಮಟ್ಟದ ಕೆಲಸವನ್ನು ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬೇಕಾಬಿಟ್ಟಿ ಕೆಲಸಗಳು ನಡೆಯುತ್ತಿದೆ. ಕಳಪೆ ರಸ್ತೆಯಿಂದ ಹಿಡಿದು ವಿಮಾನ ನಿಲ್ದಾಣದವರೆಗೆ ಕಮಿಷನ್ ದಂಧೆ ನಡೆಯುತ್ತಲೇ ಇದೆ. ಇವರಿಗೆ ಹೇಳುವವರು ಕೇಳುವವರಾರೂ ಇಲ್ಲ. ಅಧಿಕಾರದ ದರ್ಪ ದಲ್ಲಿ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವ ಈಶ್ವರಪ್ಪ ಸೇರಿದಂತೆ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಕಷ್ಟದ ಕಡೆ ಕೆಲಸ ಮಾಡುವುದು ಬಿಟ್ಟು ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು, ಗೆದ್ದ ಇತರೆ ಪಕ್ಷದವರನ್ನು ಹೇಗೆ ತಮ್ಮತ್ತ ಆಪರೇಷನ್ ಕಮಲದ ಮೂಲಕ ಸೆಳೆದುಕೊಳ್ಳಬೇಕು ಎಂದು ಚಿಂತಿಸುತ್ತಲೇ ಇರುತ್ತಾರೆ. ಇದರ ಜತೆಗೆ ಈಗ ಪಕ್ಷದೊಳಗೆ ಉದ್ಭವಿಸಿರುವ ಭಿನ್ನಾಭಿಪ್ರಾಯಗಳಿಗೆ ತೇಪೆ ಹಚ್ಚುವುದರಲ್ಲೇ ತೊಡಗಿ ಅಭಿವೃದ್ಧಿಯನ್ನೇ ಕಡೆಗಣಿಸಿದ್ದಾರೆಂದು ಟೀಕಿಸಿದರು.
ಕೊರೊನಾ ತಡೆಯುವಲ್ಲಿ ವಿಫಲ ರಾದರೂ ಡೊನೇಷನ್ ಹಾವಳಿ ತಪ್ಪಿಸಲಿಲ್ಲ. ಶಿವಮೊಗ್ಗದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಕಳಪೆಯಾದರೂ ಅಲ್ಲೂ ಕೂಡಾ ಭಾರೀ ಭ್ರಷ್ಟಾಚಾರ ನಡೆದಿದ್ದರೂ ಸಚಿವರು ಚಕಾರವೆತ್ತುತ್ತಿಲ್ಲ. ವಿಮಾನ ನಿಲ್ದಾಣಕ್ಕೆ ಬಿಜೆಪಿ ಚಿಹ್ನೆಯ ಕಮಲವನ್ನು ನೀಲಿ ನಕ್ಷೆಯ ಲ್ಲಿಟ್ಟರೂ ಸ್ವಾರ್ಥ ರಾಜಕಾರಣವೇ ತುಂಬಿ ಹೋಗಿದೆ. ಬಡವರು ಬದುಕುವುದೇ ಕಷ್ಟವಾ ಗಿದೆ. ನೆರೆ ಪರಿಹಾರ ಇನ್ನೂ ಅರ್ಹರಿಗೆ ದೊರಕಿಲ್ಲ. ಕಾರ್ಮಿಕರಿಗೆ ಕಿಟ್ ವ್ಯವಸ್ಥಿತ ವಾಗಿ ಹಂಚುತ್ತಿಲ್ಲ. ಕಾರ್ಮಿಕರ ಕಾರ್ಡ್ ಕೂಡಾ ನವೀಕರಣ ಮಾಡಿಕೊಟ್ಟಿಲ್ಲ ಎಂದು ದೂರುಗಳ ಮಳೆಗರೆದರು. ಕಾಂಗ್ರೆಸ್ ಒಂದು ತಾತ್ವಿಕ ಹೋರಾಟ ಹಮ್ಮಿಕೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಎಚ್.ಸಿ.ಯೋಗೇಶ್, ಮೇಹಕ್ ಷರೀಫ್, ಪ್ರಮುಖರಾದ ಸಿ.ಎಸ್.ಚಂದ್ರ ಭೂಪಾಲ, ವಿಶ್ವನಾಥ್ ಕಾಶಿ ಇತರರಿದ್ದರು.