ಶಿವಮೊಗ್ಗ: ಶಿವಮೊಗ್ಗದಿಂದ ಪ್ರವಾಸಕ್ಕೆ ಮುರುಡೇಶ್ವರಕ್ಕೆ ತೆರಳಿದ್ದ ನಾಲ್ವರು ಪ್ರವಾಸಿಗರಲ್ಲಿ ಇಬ್ಬರು ಸಮುದ್ರ ಪಾಲಾಗಿದ್ದಾರೆ.
ಒಬ್ಬನ ಮೃತದೇಹ ಪತ್ತೆಯಾಗಿದ್ದು, ಮತ್ತೋಬ್ಬನಿಗಾಗಿ ಶೋಧ ಮುಂದುವರೆದಿದೆ.
ಶಿಕಾರಪುರ ಮಾಸೂರು ನಿವಾಸಿಗಳಾದ ಮಣಿ ಹಾಗೂ ನಾಗರಾಜ ಅಲೆಗಳಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಮಣಿಯ ಮೃತದೇಹದಲ್ಲಿ ದಡದಲ್ಲಿ ಸಿಕ್ಕಿದ್ದು, ನಿಷೇಧಿತ ಪ್ರದೇಶದಲ್ಲಿ ಈಜಲು ಹೋಗಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ.
ಬೇಕರಿ ಮಂಜುನಾಥ ಹಾಗೂ ಪ್ರವೀಣ ಎಂಬುವರು ಬಂಡೆ ಹಿಡಿದುಕೊಂಡು ಬಚಾವಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮುರುಡೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.