Site icon TUNGATARANGA

ತಾಯಿಗೆ ನಿಂದಿಸಿದ ತಂದೆಯನ್ನೇ ಕೊಂದ…!

ಸಂಗ್ರಹ ಚಿತ್ರ

ಶಿವಮೊಗ್ಗ, ಜು.14: ಇದನ್ನ ತಾಯಿ ಬಗ್ಗೆ ವಾತ್ಸಲ್ಯ ಎನ್ನಬೇಕೋ…., ಹರೆಯದ ವಯಸ್ಸಿನ ಆಕ್ರೋಶವೆನ್ನಬೇಕೋ…, ಹಾಗೇ ತಂದೆಯ ವರ್ತನೆ ಎನ್ನಬೇಕೋ ಗೊತ್ತಿಲ್ಲ. ಇಲ್ಲಿ ತಂದೆಯನ್ನೇ ನಿರ್ದಾಕ್ಷಣ್ಯವಾಗಿ ಮಗ ಕೊಂದಿರುವ ಘಟನೆ ನಿನ್ನೆ ನಡೆದಿದೆ.
ಶಿವಮೊಗ್ಗ ಹಳೇಬೊಮ್ಮನಕಟ್ಟೆ ಸಿದ್ದಪ್ಪನಗರದ ರಾಕೇಶ್ ಎಂಬ 24 ವರುಷದ ಯುವಕ ತನ್ನ ತಂದೆ ಮಂಜುನಾಥ್ (56)ರನ್ನೇ ಬೀಕರವಾಗಿ ಕೊಲೆ ಮಾಡಿದ್ದಾನೆ.
ಮಂಜುನಾಥ್ ರ ಹಿರಿಯ ಮಗಳ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಾಯಿ ಸಹ ಆಸ್ಪತ್ರೆಯಲ್ಲಿದ್ದಾಗ ಮನೆಯಲ್ಲಿ ಅಪ್ಪ ಮಗ ಜಗಳವಾಡಿದ್ದಾರೆ.
ತಾಯಿಯ ಬಗ್ಗೆ ಅಸಭ್ಯವಾಗಿ ಮಾತಾಡಿದ ತಂದೆಯ ವರ್ತನೆ ವಿರುದ್ದ ಮಗ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದಿದ್ದಾನೆ. ಆತ ಸ್ಥಳದಲ್ಲೇ ಸಾವು ಕಂಡಿದ್ದಾನೆ.
ರಾಕೇಶ ಗಾರೆ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು ತಾಳ್ಮೆ ಕಳೆದುಕೊಂಡವನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ.
ಈ ಸಂಬಂಧ ಸ್ಥಳಕ್ಕೆ ಬೇಟಿ ನೀಡಿದ ವಿನೋಬ ನಗರ ಎಸೈ ಉಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version