Site icon TUNGATARANGA

ಶಿವಮೊಗ್ಗದಲ್ಲಿ ಕೊರೊನಾಗೆ ಮತ್ತೊಂದು ಬಲಿ…? ಇಂದು 21 ಅಥವಾ 74…?!

ಶಿವಮೊಗ್ಗ : ಕೊರೊನಾ ನಗರವನ್ನು ಬಿಟ್ಟುಬಿಡದೇ ಕಾಡುತ್ತಿದೆ. ನಿರಂತರ ಸೊಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಈಗಷ್ಟೆ ಮತ್ತೊಂದು ಬಲಿ ಪಡೆದ ಬಗ್ಗೆ ಮೂಲಗಳು ವರದಿ ಮಾಡಿವೆ.
ಸೊಂಕಿತರು ಚಿಕಿತ್ಸೆ ಪಡೆಯತ್ತಿರುವ ಕೋವಿಡ್ ಆಸ್ಪತ್ರೆಯಲ್ಲಿ ಈಗ ತುಂಗಾನಗರ ಮೂಲದ ಸುಮಾರು 52ವರುಷದ ಮಹಿಳೆ ಸಾವು ಕಂಡ ಬಗ್ಗೆ ಮೂಲಗಳು ಹೇಳಿವೆ. ಒಟ್ಟಾರೆ ಹನ್ನೊಂದು ಸೊಂಕಿತರು ಸಾವು ಕಂಡಿದ್ದಾರೆನ್ನಲಾಗಿದೆ. ನಾಳೆ ಬೆಳಿಗ್ಗೆ ಹತ್ತರ ಹೊತ್ತಿಗೆ ರೋಟರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಹೇಳಲಾಗಿದೆ.
ಸರಿಯಾಗದ ವರದಿ:
ಜಿಲ್ಲಾಡಳಿತ ಬಿಡುಗಡೆ ಮಾಡಿದ ಕೊರೊನಾ ಕುರಿತ ಇಂದಿನ ವರದಿಯಲ್ಲಿ 21 ಜನರಲ್ಲಿ ಸೊಂಕು ಕಾಣಿಸಿಕೊಂಡಿದೆ. ಅದೇ ರಾಜ್ಯ ಇಲಾಖಡಯ ವರದಿ ಪ್ರಕಾರ ಇಂದಿನ ಸೊಂಕಿತರ ಸಂಖ್ಯೆ ಬರೋಬ್ಬರಿ 74. ಜಿಲ್ಲಾವರದಿಯ ಒಟ್ಟಾರೆ ಸಂಖ್ಯೆ 568 ಆಗಿದ್ದು 29 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ರಾಜ್ಯ ವರದಿ ಅನುಸಾರ ಒಟ್ಟು ಸಂಖ್ಯೆ 520 ಅಷ್ಟೆ. ಈ ಎರಡೂ ಸಮಗ್ರ ಮಾಹಿತಿಯನ್ನು ಸುದ್ದಿಯ ಜೊತೆ ನೀಡಲಾಗಿದೆ. ನಿಮ್ಮ ವಿವೇಚನೆ ಜೊತೆ ಮಾಹಿತಿ ಪಡೆಯಬಹುದಷ್ಟೆ…

Exit mobile version