Site icon TUNGATARANGA

ಶಿವಮೊಗ್ಗ ಲಾಕ್‍ಡೌನಾ..? ನಗರದಲ್ಲಿ ಅರವತ್ತಕ್ಕೂ ಹೆಚ್ಚು ಕಂಟೈನ್‌ಮೆಂಟ್ ಜೋನ್ !

ಶಿವಮೊಗ್ಗ ನಗರದಲ್ಲಿ ಕೋವಿಡ್-೧೯ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ಬಿಟ್ಟು ಬಿಡದೇ ಕಾಡುತ್ತಿರುವ ಕೊರೊನಾ ಶಿವಮೊಗ್ಗ ನಗರದ ಬಹುತೇಕ ಶೇ.೯೦ರಷ್ಟು ಬಡಾವಣೆಗಳಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿಕೊಂಡಿದೆ.
ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದವರೆಗೆ ನಗರದಲ್ಲಿ ೨೧ ಕಂಟೈನ್ಮೆಟ್ ಜೋನ್‌ಗಳಿಗೆ ಬರುತ್ತವೆ ಎಂದರೆ ಹರಡುತ್ತಿರುವ ಕೊರೊನಾ ಸೋಂಕಿನ ಸಂಖ್ಯೆಯನ್ನು ಅರ್ಥಮಾಡಿಕೊಳ್ಳಬಹುದಲ್ಲವೇ..ನಗರರದಲ್ಲಿ ಅರವತ್ತಕ್ಕೂ ಹೆಚ್ಚು ಕಂಟೈನ್‌ಮೆಂಟ್ ಜೋನ್‌ಗಳು ನಿರ್ಮಾಣವಾಗಿವೆ
ಶಿವಮೊಗ್ಗ ನಗರದಲ್ಲಿ ಈಗಾಗಲೇ ಸ್ವಯಂ ಪ್ರೇರಿತರಾಗಿ ಗಾಂಧಿ ಬಜಾರ್‌ನ ವರ್ತಕರ ಸಂಘ ಕರೆ ನೀಡಿರುವ ಹೇಳಿಕೆಯು ಕಾರ್ಯ ಪ್ರವೃತವಾದಂತಿದೆ. ನೆಹರೂ ರಸ್ತೆ, ಬಿ.ಹೆಚ್.ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮದ್ಯಾಹ್ನ ೩ರ ನಂತರ ವ್ಯಾಪಾರ ವಹಿವಾಟು ನಿಲ್ಲಿಸಲು ಕೋರುತ್ತಿರುವ ಸನ್ನಿವೇಶ ಕಂಡುಬಂದಿತು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಶಿವಮೊಗ್ಗ ಕಸ್ತೂರು ಬಾ ರಸ್ತೆಯೊಂದರಲ್ಲೇ ೭ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ನಗರದ ಹೊರ ಬಡಾವಣೆಗಳಾದ ಸಹ್ಯಾದ್ರಿ ನಗರ, ದೇವರಾಜ್ ಅರಸ್ ಬಡಾವಣೆ, ಜೆ.ಹೆಚ್.ಪಟೇಲ್ ಬಡಾವಣೆ, ಗೋಪಾಳ ಸೇರಿದಂತೆ ಹಲವೆಡೆ ಈ ಸೋಂಕು ಹೊಸದಾಗಿ ಕಾಣಿಸಿಕೊಂಡಿದೆ.
ಇದರ ಬೆನ್ನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಕುರಿತಂತೆ ನಾಳೆ ನಿರ್ಧಾರ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಸಿಎಂ ನಿರ್ಧಾರ: ಇಂದು ಸಂಜೆ 4ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಳ್ಳುವ ಜಿಲ್ಲಾಡಳಿತಗಳ ಜೊತೆಗಿನ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಹ ಭಾಗವಹಿಸಲಿದ್ದು, ಬಹುತೇಕ ಅರ್ಧದಿನ ಲಾಕ್‌ಡೌನ್ ಖಚಿತವೆನ್ನಲಾಗುತ್ತಿದೆ.

ಹೊರವಲಯದಲ್ಲಿ ಚೆಕ್ ಪೋಸ್ಟ್
ಬೆಂಗಳೂರಿನಿಂದ ಆಗಮಿಸುವವರ ಸಂಪೂರ್ಣ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಶಿವಮೊಗ್ಗ ಜಿಲ್ಲೆಗೆ ಸೇರುವ ಎಲ್ಲಾ ಮಾರ್ಗಗಳ ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಸೂಚಿಸಿದ್ದಾರೆ.
ಈಗಾಗಲೇ ಕೆರೆಹಳ್ಳಿ, ಹಂಚಿನ ಸಿದ್ದಪುರ, ಸವಳಂಗ ರಸ್ತೆ, ನ್ಯಾಮತಿ ರಸ್ತೆ, ತರಿಕೆರೆ ಪಾಯಿಂಟ್, ಆಗೊಂಬೆ, ಸಿಂಗಧೂರು ಸೇರಿದಂತೆ ಹಲವೆಡೆ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ.

Exit mobile version