Site icon TUNGATARANGA

ಗಾಂಜಾ ಬೆಳೆದ ವ್ಯಕ್ತಿಗೆ 3ವರ್ಷ ಕಠಿಣ ಶಿಕ್ಷೆ, 50ಸಾವಿರ ದಂಡ


ಶಿವಮೊಗ್ಗ : ತಾಲೂಕಿನ ಹೊಸನಗರದ ನೆವಟೂರು ಗ್ರಾಮದ ಜಮೀನನಲ್ಲಿ ಮುಸುಕಿನ ಜೋಳದ ಹಾಗೂ ಅಡಿಕೆ ಸಸಿಗಳ ನಡುವೆ ಅಕ್ರಮವಾಗಿ ಗಾಂಜಾಗಿಡ ಬೆಳೆದಿದ್ದ ಆರೋಪಿ ಮಂಜುನಾಥಚಾರಿಗೆ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ  ಮುಸ್ತಫಾ ಹುಸೇನ್ ಅವರು 3 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ, ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಅಕ್ರಮವಾಗಿ ಗಾಂಜಾವನ್ನು ಬೆಳೆದಿರುವ ಬಗ್ಗೆ ಮಾಹಿತಿ ಮೇರೆಗೆ ಜಿ.ಆರ್.ಸಂಗನಾಥ್ ಪಿಐ ಸಿಇಎನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು ತಹಸಿಲ್ದಾರ್ ಚಂದ್ರಶೇಖರ್ ನಾಯ್ಕ್ ರವರ ಜೊತೆಗೆ ದಾಳಿ ನಡೆಸಿ ಸುಮಾರು ೨೧೦ ಕೆ.ಜಿ ತೂಕದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು  20 (ಬಿ) NDPS  ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿದ್ದರು.
ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪ್ರಭಾರ ಪಿಎಸ್‌ಐ ರಾಹತ್ ಆಲಿ ತನಿಖೆ ಕೈಗೊಂಡು ಆರೋಪಿ ಮಂಜುನಥಾಚಾರಿ (63) ನೆವಟೂರು ಗ್ರಾಮ ಮತ್ತು ದರ್ಶನ್  ನೆವಟೂರು ಗ್ರಾಮ ರವರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಶಿವಮೊಗ್ಗದ ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Exit mobile version