Site icon TUNGATARANGA

ಮಾಮೂಲಿ ಕೊರೊನಾ ಕಥೆ, ನಾಲ್ವರು ಸಾವು.. ಜಿಲ್ಲೆ ಕಥೆ ಇಲ್ಲಿದೆ ನೋಡಿ

ಶಿವಮೊಗ್ಗ, ಜೂ.22:

ಶಿವಮೊಗ್ಗದಲ್ಲಿ ಕೊರೊನಾ ಪ್ರಮಾಣ ಇಳಿದಂತಷ್ಟೇ ಆಟವಾಡುತ್ತಿದೆ. ನೂರರ ಗಡಿ ದಾಟುತ್ತಿರುವುದಲ್ಲದೇ ಕೊರೊನಾ ಒಂದೇ ಕಾರಣಕ್ಕೆ ಸಾವು ಕಾಣುತ್ತಿರುವವರ ಸಂಖ್ಯೆ ಅದೇ ಹಾದಿಯಲ್ಲಿದೆ.
ಇಂದು ಜಿಲ್ಲೆಯಲ್ಲಿ 167 ಜನರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2020 ಸಕ್ರಿಯ ಪ್ರಕರಣಗಳಿವೆ.
3657 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 3402 ಜನರಿಗೆ ನೆಗೆಟಿವ್ ಬಂದಿರುವುದು ಸಂತಸದ ವಿಷಯವೇ ಹೌದು.
ಇಂದು ಜಿಲ್ಲೆಯಲ್ಲಿ 04 ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 954 ಜನ ಕೊರೊನಾ ಸೋಂಕಿನಿಂದ ಸಾವಿನ್ನಪ್ಪಿದಾರೆ.
ಇಂದು 500 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 264 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 329 ಜನ ಸೋಂಕಿನಿಂದ ದಾಖಲಾಗಿದ್ದಾರೆ. 401 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಐವರು ವಿದ್ಯಾರ್ಥಿಗಳಲ್ಲಿ ಸೊಂಕು ಕಾಣಿಸಿಕೊಂಡಿದೆ.
ತಾಲೂಕು ವರದಿ
ಶಿವಮೊಗ್ಗ : 93
ಭದ್ರಾವತಿ : 19
ಶಿಕಾರಿಪುರ : 5
ತೀರ್ಥಹಳ್ಳಿ : 11
ಸೊರಬ : 12
ಸಾಗರ : 21
ಹೊಸನಗರ : 3
ಇತರೆ ಜಿಲ್ಲೆ- 03

Exit mobile version