Site icon TUNGATARANGA

ಕೊರೊನದಿಂದ ರಾಜ್ಯದ ಅಭಿವೃದ್ದಿ ಕಾರ್ಯಕ್ಕೆ ತಡೆ ಇಲ್ಲ: ಬಿವೈಆರ್

Hosanagar Byr Function


ಹೊಸನಗರ: ಕೋವಿಡ್‌ನಿಂದ ಇಡೀ ದೇಶವೇ ಇಂದು ಸಂಕಷ್ಟದಲ್ಲಿದೆ.ಇದು ಜನಸಾಮಾ ನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ರೋಗವನ್ನು ಹೋಗಲಾಡಿಸಲು ಜನತೆ ತಪ್ಪದೇ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ಸೇವಾ ಭಾರತಿ ಹಾಗೂ ಪ್ರೇರಣ ಎಜು ಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕೊರೊನದಿಂದ ಆರ್ಥಿ ಕವಾಗಿ ತತ್ತರಿಸಿರುವ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ನಿಯಮ ಪಾಲನೆ ಮೂಲಕ ಕೋವಿಡ್ ಮುಕ್ತ ಭಾರತವನ್ನು ಕಟ್ಟಲು ಜನತೆ ಸಹಕರಿಸಬೇಕು.ಕಠಿಣ ಲಾಕ್‌ಡೌನ್ ಮಾಡಿರುವುದು ಜನರಿಗೆ ಶಿಕ್ಷೆ ನೀಡಲು ಅಲ್ಲ. ಜನರ ಜೀವ ಉಳಿಸಲು ಎಂಬು ದನ್ನು ಎಲ್ಲರೂ ಮನಗಾಣಬೇಕು. ಇದು ಸರ್ಕಾರಕ್ಕೆ ಅನಿವಾರ್ಯ ಸಹ. ಕೋವಿಡ್ ೩ನೇ ಅಲೆ ಕುರಿತು ಎಲ್ಲರೂ ಜಾಗರೂಕತೆ ವಹಿಸಬೇಕಿದೆ. ಅದು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ದೇಶದಲ್ಲಿ ಈಗಾಗಲೇ ೩ ಸಾವಿರ ಮಕ್ಕಳಿಗೆ ಕೋವಿಡ್ ರೋಗ ತಗುಲಿದ್ದು, ಮಕ್ಕಳ ಆರೈಕೆಗಾಗಿ ಪೋಷಕರು ಅವರ ಜೊತೆ ಇರಲೇ ಬೇಕಾದ ಸಂದಿಗ್ದ ಸ್ಥಿತಿ ಬಂದೊದಗಿರುವುದು ನಿಜಕ್ಕೂ ದುರಂತವೇ ಸರಿ ಎಂದರು.
ಈ ವೇಳೆ ಕೊರೋನ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ರಿಕ್ಷಾ ಚಾಲಕರು, ಬಸ್ ಏಜೆಂಟರು, ಆಶಾ ಕಾರ್ಯಕರ್ತರು, ಪೊಲೀಸ್ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ,ಪತ್ರಕರ್ತರು, ಪೌರ ನೌಕರರು ಸೇರಿದಂತೆ ಹಲವ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
ರಾಜ್ಯ ಎಂಎಸ್‌ಐಎಲ್ ಸಂಸ್ಥೆ ಅಧ್ಯಕ್ಷ ಹರತಾಳು ಹಾಲಪ್ಪ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಸೇವಾ ಭಾರತಿ ಪ್ರಮುಖರಾದ ಹನಿಯರವಿ, ಪಕ್ಷದ ಜಿಲ್ಲಾಧ್ಯಕ್ಷ ಮೇಘರಾಜ್, ತಾಲೂ ಕಿನ ಬಿಜೆಪಿ ಅಧ್ಯಕ್ಷಗಣಪತಿ ಬೆಳಗೋಡು, ಜಿ.ಪಂ.ಸದಸ್ಯ ಸುರೇಶ್ ಸ್ವಾಮಿರಾವ್, ತಾ.ಪಂ.ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ್, ಪ್ರಮುಖರಾದ ದೇವಾನಂದ್, ಸುಧಾಕರ್, ಉಮೇಶ್ ಕಂಚುಗಾರ್, ಮಲ್ಲಿಕಾರ್ಜುನ್, ಕೋಣೆಮನೆ ಶಿವಕು ಮಾರ್, ಗುಲಾಬಿ ಮರಿಯಪ್ಪ, ಗುರುರಾಜ್, ಸುರೇಂದ್ರ ಕೋಟ್ಯಾನ್, ಮಂಡಾನಿ ಮೋಹನ್ ಮೊದಲಾದವರು ಇದ್ದರು.

Exit mobile version