ಶಿವಮೊಗ್ಗ, ಜೂ.೦೮:
ಸ್ಟೈಲ್ ಡಾನ್ಸ್ ಗ್ರೂಪ್ ಶಿವಮೊಗ್ಗ ಇವರ ೧೩ನೇ ವರ್ಷದ ವಾರ್ಷಿಕೊತ್ಸವದ ಪ್ರಯುಕ್ತ ತಾಲ್ಲೂಕು ಮಟ್ಟದ ಆನ್ ಲೈನ್ ಸೋಲೋ ನೃತ್ಯ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಕ್ತಾಯವಾಗಿದೆ.
ಈ ಸೋಲೋ ಸ್ಪರ್ಧೆಯಲ್ಲಿ ಶಿವಮೊಗ್ಗ ಮಾತ್ರವ ಲ್ಲದೆ ತಾಲ್ಲೂಕಿಗೆ ಒಳಪಡುವ ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ, ಹೊಸನಗರ,ಎಲ್ಲೇಡೆ ಇಂದಲೂ ತಾಯಂದಿರು, ಕಾಲೇಜು ವಿದ್ಯಾರ್ಥಿಗಳು ,ಪುಟಾಣಿ ಮಕ್ಕಳು ಸೇರಿದಂತೆ ಹಲವಾರು ಸ್ಪರ್ಧಿಗಳು ಭಾಗವ ಹಿಸಿ ಸಂತಸ ಹಂಚಿಕೊಂಡಿದ್ದಾರೆ ಮತ್ತು ಕೋವಿಡ್ ಸಂಧರ್ಭದ ಬೇಸರದಲ್ಲಿದ್ದ ಜನಗಳಿಗೆ ಮನೆಯಲ್ಲೆ ಇದ್ದು ಇಡೀ ಶಿವಮೊಗ್ಗದಾದ್ಯಂತ ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಿಕೊಳ್ಳಲು ಈ ಸ್ಪರ್ಧೆ ಅತ್ಯಂತ ಬೃಹತ್ ವೇದಿಕೆಯಾಗಿತ್ತು
ಈ ಮೂಲಕ ಸ್ಪರ್ಧೆಗೆ ಭಾಗವಹಿಸಿದ ಪ್ರತಿಯೊಬ್ಬ ಪ್ರತಿಭಾನ್ವಿತರಿಗೂ ಮತ್ತು ಸ್ಪರ್ಧಿಗಳ ಪ್ರತಿಭೆ ಪ್ರೋತ್ಸಾಹಿಸಿದ ಅವರ ಕುಟುಂಬದವರಿಗೆ ಸಂಸ್ಥೆಯ ಪರವಾಗಿ ಧನ್ಯವಾದಗಳು.
ಸ್ಪರ್ಧೆಗೆ ಸಹಕರಿಸಿದ ಶುಭಂ ಹೊಟೇಲ್ ಮಾಲೀಕ ಚಂದ್ರಹಾಸ್ ಶೆಟ್ಟಿ, ಎ.ಎಸ್ ಪ್ರೋಡಕ್ಷನ್ ಮಾಲೀಕರಾದ ಅಶ್ವಿನಿ , ಜೆಸಿಐ ಶಿವಮೊಗ್ಗ ಬಳಗ, ಸಿಂಪ್ಲೇಕ್ಸ್ ವರ್ಡ್ ಶಿವಮೊಗ್ಗ ಮಾಲೀಕ ರಮೇಶ್, ತುಂಗಾತರಂಗ ದಿನಪತ್ರಿಕೆ ಮಾಲೀಕರಾದ ಗಜೇಂದ್ರಸ್ವಾಮಿ ಇವರೆಲ್ಲರಿಗೂ ನಮ್ಮ ಸ್ಟೈಲ್ ಡಾನ್ಸ್ ಗ್ರೂಪ್ ನೃತ್ಯ ಸಂಸ್ಥೆಯ ಪರವಾಗಿ ಸಂಸ್ಥಾಪಕ ಶಶಿಕು ಮಾರ್ ಎನ್ , ಆಯೋಜಕ ವಿನಯ್, ಸಚ್ಚಿನ್, ದರ್ಶನ್ ಇವರು ವಿಶೇಷ ಧನ್ಯವಾದ ತಿಳಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ
- ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಜೂ.14 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
” ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
” ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ. - ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. - ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
- ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
*ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
*ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ. - ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.