Site icon TUNGATARANGA

ಕೊರೊನಾಗೆ ಮತ್ತೊಂದು ಸಾವು? ದೊಡ್ಡಪೇಟೆ ಪೊಲೀಸರಿಗೂ ಕ್ವಾರಂಟೈನ್!

ಶಿವಮೊಗ್ಗ, ಜು.11: ಎಷ್ಟು ಜನರಿಗೆ ಕೊರೊನಾ ಬಂದಿದೆ ಎಂದು ನೋಡುವ ಬದಲಿಗೆ ಕೊರೊನಾದಿಂದ ಆಗುತ್ತಿರುವ ಅವಘಡಗಳನ್ನು ಜನ ಅರಿತುಕೊಳ್ಳದಿದ್ದರೆ ನಡೆಯುವ ಅನಾಹುತಗಳ ಸಂಖ್ಯೆ ಹೆಚ್ಚುತ್ತಿದೆ.
ನಿನ್ನೆ ಬಂದ ಆರೋಗ್ಯ ಇಲಾಖೆಯ ಮಾಹಿತಿಯಾನುಸಾರ ಶಿವಮೊಗ್ಗ ಜಿಲ್ಲೆಯಲ್ಲಿ 6 ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಈ ದಾಖಲೆಯಲ್ಲಿ ಕಾಣಿಸಿಕೊಳ್ಳದ ಕಸ್ತೂರಿಬಾ ರಸ್ತೆಯ ಕೊರೊನಾ ಸೋಂಕಿತನ ಸಾವಿನ ವಿಚಾರ ರೋಟರಿ ಚಿತಗಾರದ ಎದುರು ನಡೆದ ಪ್ರತಿಭಟನೆಯಿಂದ ಬಹಿರಂಗಗೊಂಡಿದೆ.
ಈ ಘಟನೆಯ ಬೆನ್ನಲ್ಲೆ ಶಿವಮೊಗ್ಗ ಗಾಂಧಿಬಜಾರ್‌ನ ವ್ಯಕ್ತಿಯೋರ್ವರು ಇಂದು ಬೆಳಗ್ಗೆ ಸಾವು ಕಂಡಿರುವ ಘಟನೆ ನಡೆದಿದೆಯಂತೆ. ಅಧಿಕೃತವಲ್ಲದ ಮೂಲಗಳಾಗಿದ್ದರೂ ನಿಖರ ಸುದ್ದಿ ಮೂಲಗಳ ಆಧಾರದಲ್ಲಿ ಸಾವು ಕಂಡಿರುವ ಘಟನೆಯನ್ನು ಪುಷ್ಟಿಕರಿಸುವಂತಹ ಮಾಹಿತಿಗಳು ಲಭ್ಯವಾಗಿವೆ.
ನಿನ್ನೆ ಮಧ್ಯಾಹ್ನ ಕಸ್ತೂರಿ ಬಾ ರಸ್ತೆಯ ಸೋಂಕಿತ ವೃದ್ದನ ಸಾವಿನ ಜೊತೆಗೆ ೨೪ ಘಂಟೆಯೊಳಗೆ ಮತ್ತೋರ್ವ ಸಾವು ಕಂಡಿರುವ ಮಾಹಿತಿ ಅತಂಕವನ್ನು ಈ ಮಾಹಿತಿಯನ್ನು ಆರೋಗ್ಯ ಇಲಾಖೆ ಹೊರಹಾಕಬೇಕಿದೆ.
ಪ್ರಕರಣ ವಿಚಾರಣೆಯೊಂದಕ್ಕೆ ಸಂಬಂಧಪಟ್ಟಂತೆ ಚಾಕು ಇರಿತ ವ್ಯಕ್ತಿಯೋರ್ವನ ಹೇಳಿಕೆ ಪಡೆಯಲು ಮುಂದಾಗಿದ್ದ ಹಾಗೂ ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಕಳುಹಿಸಿ ಬಂದಿದ್ದ ಪ್ರಕರಣವೊಂದರಲ್ಲಿನ ಸುಮಾರು ನಾಲ್ವರು ಪೊಲೀಸರು ಇಂದು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಮಿಳಘಟ್ಟದ ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿ ದೊಡ್ಡಪೇಟೆ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣದ ದೂರುದಾರ ಹಾಗೂ ಚಾಕು ಇರಿತಕ್ಕೊಳಗಾದ ವ್ಯಕ್ತಿಗೆ ಇಂದು ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನ ಹೇಳಿಕೆ, ವಿಚಾರಣೆ ಹಾಗೂ ದಾಖಲೆ ಸಂಗ್ರಹದ ಸಮಯದಲ್ಲಿ ಅತ್ಯಂತ ಹತ್ತಿರವಿದ್ದ ನಾಲ್ವರು ಪೊಲೀಸರನ್ನು ಇಂದು ಕ್ವಾರಂಟೈನ್‌ಗೆ ಕಳಹಿಸಲಾಗಿದೆ ಎಂದು ನಿಕಟ ಮೂಲಗಳು ತಿಳಿಸಿವೆ.

Exit mobile version