Site icon TUNGATARANGA

ಶಿವಮೊಗ್ಗದಲ್ಲಿಂದು ಕೊರೊನಾಗೆ 13 ಬಲಿ, ಸೊಂಕಿನ ಸಂಖ್ಯೆ ಕಡಿಮೆಯಾದರೂ ಸಾವು ಮಾಮೂಲಿ…! ಶಿವಮೊಗ್ಗದ ಇಂದಿನ ಕಥೆ, ವ್ಯಥೆ ನೋಡಿ

ಶಿವಮೊಗ್ಗ, ಮೇ.31:
ಜಿಲ್ಲೆಯಲ್ಲಿ ಸೋಮವಾರವಾದ ಇಂದು ಕೊರೊನಾ ಸೋಂಕು ಕಂಡು ಬಂದಿರುವವರ ಸಂಖ್ಯೆ 631 ಜನರಲ್ಲಿ ಸೊಂಕು ಕಂಡು ಬಂದಿದೆ. ಜಿಲ್ಲೆಯಲ್ಲಿ ಇದಕ್ಕೆ ತುತ್ತಾಗಿ 13 ಮಂದಿ ಸಾವಿಗೀಡಾಗಿದ್ದಾರೆ. ಪ್ರತಿದಿನ ಸಾವು ದಶಕ ದಾಟುತ್ತಿರುವುದು ಆತಂಕ ಮೂಡಿಸಿದೆ.


ಇಂದು ಜಿಲ್ಲೆಯಲ್ಲಿ 3089 ಪರೀಕ್ಷಿತರಾಗಿದ್ದಾರೆ. 631 ಮಂದಿಗೆ ಸೋಂಕು ತಗುಲಿದ್ದು, 1612 ಜನರಿಗೆ ನೆಗಿಟೀವ್ ಬಂದಿದೆ. 1016 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 820ಕ್ಕೆ ಏರಿದೆ.
ಶಿವಮೊಗ್ಗ ತಾಲೂಕಿನಲ್ಲಿ 275, ಭದ್ರಾವತಿ 115, ಸಾಗರ 52 , ಸೊರಬ 43, ತೀರ್ಥಹಳ್ಳಿ 55, ಶಿಕಾರಿಪುರ 55, ಹೊಸನಗರ 19 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಇತರೆ ಜಿಲ್ಲೆಯ 16ಜನರಲ್ಲಿ ಸೊಂಕು ಕಂಡುಬಂದಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ


28 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 6594 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Exit mobile version