Site icon TUNGATARANGA

ಶಿವಮೊಗ್ಗ ಲಾಕ್‌ಡೌನ್ : ನಗರದಲ್ಲಿ ಎಲ್ಲಿ ಹೇಗಿದೆ ಸ್ಥಿತಿ?

shivamogga lock down

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಇಂದಿನಿಂದ ಜೂನ್ 7ರವರೆಗೆ ಕಠಿಣ ಲಾಕ್‌ಡೌನ್ ಜಾರಿಗೊಳಿಸಿದ್ದು, ಇದಕ್ಕೆ ನಗರದ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.


ಇಂದು ಬೆಳಗ್ಗೆ ನಗರದ ಸಾರ್ವಜನಿಕರು ಬೆಳಗ್ಗೆ ೬ರಿಂದ ೧೦ರವರೆಗೆ ಕಾಲಾವಕಾಶ ನೀಡಿದ ವೇಳೆ ಯಲ್ಲಿ ಜನರು ರಸ್ತೆಗಳಿದ್ದಿದ್ದರು. ಬೆಳಗ್ಗೆ ಪೊಲೀಸರು ಧ್ವನಿವರ್ಧಕಗಳ ಮೂಲಕ ಅಂಗಡಿ, ಮಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ ಬಳಿಕ ಎಲ್ಲಾ ಅಂಗಡಿಗಳ ಮಾಲೀಕರು ಬಂದ್ ಮಾಡಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ


ಕೊರೊನಾ ಮಾರ್ಗಸೂಚಿ ನಿಯಮದಂತೆ ಔಷಧಿ ಅಂಗಡಿಗಳು, ಆಸ್ಪತ್ರೆ, ಮನೆಗಳಿಗೆ ಹಾಲು ಪೂರೈಕೆ, ಪತ್ರಿಕೆ ವಿತರಣೆ ಹೀಗೆ ಹಲವರ ಸಂಚಾರಕ್ಕೆ ಯಾವುದೇ ವ್ಯತ್ಯಯವಾಗಿಲ್ಲ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀ ಸರು ಗಸ್ತಿನಲ್ಲಿದ್ದ ಕಾರಣ ಕೆಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ತಳ್ಳುಗಾಡಿಗಳಲ್ಲಿ ಬೆಳಿಗ್ಗೆ ೬ರಿಂದ ಸಂಜೆ ೬ರವರೆಗೆ ನಿಗದಿಪಡಿಸಲಾಗಿರುವ ಪ್ರದೇಶ ವ್ಯಾಪ್ತಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅವಶ್ಯಕ ಸೇವೆಗಳಿಗೆ ಗುರುತಿಸಲಾಗಿರುವ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಚೇರಿಗಳು ತೆಗೆದಿರಲಿಲ್ಲ. ಕನಿಷ್ಟ ಮಟ್ಟದಲ್ಲಿ ಬ್ಯಾಂಕ್ ಸೇವೆ ಕಾರ್ಯನಿರ್ವಹಿಸಿತು.
ಒಟ್ಟಾರೆ ಶಿವಮೊಗ್ಗ ಮೊದಲ ದಿನಗಳಿಗಿಂತ ಇಂದು ಸ್ವಲ್ಪ ಬಿಗಿ ಬಂದ್‌ಬಸ್ತ್ ಏರ್ಪಡಿಸಲಾಗಿತ್ತು.

ಲಾಕ್‌ಡೌನ್ ವೇಳೆ ಕಳ್ಳತನ
ಲಾಕ್ ಡೌನ್ ವೇಳೆ ಗಾಂಧಿನಗರದ ಅಂಗಡಿಯೊಂದರ ಬೀಗ ಮುರಿದು ಕಳ್ಳತನ ಮಾಡೊರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಗಾಂಧಿನಗರ ಉದ್ಯಾನ ಮುಂಭಾಗದಲ್ಲಿರುವ ಮಂಜುನಾಥ್ ಪ್ರಾವಿಜನ್ ಸ್ಟೋರ್ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
ದಿನಸಿ ಅಂಗಡಿ ರಸ್ತೆಯ ಬದಿಯಲ್ಲೇ ಇದೆ. ಹೀಗಾಗಿ, ಯಾರ ಓಡಾಡವೂ ಸರಳವಾಗಿ ಗೊತ್ತಾಗುತ್ತದೆ. ಆದರೆ, ಕಳ್ಳರು ಲಾಕ್ ಡೌನ್ ಪ್ರಯೋಜನ ಪಡೆದು ಕೃತ್ಯ ಎಸಗಿದ್ದಾರೆ.

Exit mobile version